ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್‌ರ 106ನೇ ಜನ್ಮದಿನಾಚರಣೆ
ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಕರುಣಾರನ್‌ರ 106ನೇ ಜನ್ಮದಿನವನ್ನು ಕರುಣಾ ಕರನ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಆಚರಿಸಲಾ ಯಿತು. ಸಂಸ್ಮರಣೆ ಕಾರ್ಯಕ್ರಮ ವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಅವರು ಮಾತನಾಡಿ ಜನರ ಮನಸ್ಸು ತಿಳಿಯಲಿರುವ ಸಾಮಾನ್ಯ ಜ್ಞಾನ ಆಡಳಿತಾಧಿಕಾರಿಗೆ ಇರಬೇಕಾಗಿದ್ದು, ಅದಿಲ್ಲದಿರುವುದಾಗಿದೆ ಕೇರಳದ ಈಗಿನ ಆಡಳಿತದ ದುರಂತ ಎಂದು, ಕೆ. ಕರುಣಾಕರನ್‌ರ ಬಗ್ಗೆ ಇಂತವರು ಕಲಿಯಲು ಸಿದ್ಧರಾಗಬೇಕೆಂದು ಉಣ್ಣಿತ್ತಾನ್ ಆಗ್ರಹಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ. ನೀಲಕಂಠನ್, ಪಿ.ಎ. ಅಶ್ರಫಲಿ, ಎಂ.ಸಿ. ಪ್ರಭಾಕರನ್, ಕರುಣಾ ತಾಪ, ಪಿ.ವಿ. ಸುರೇಶ್, ಶ್ಯಾಮ್ ಪ್ರಸಾದ್ ಮಾನ್ಯ, ಧನ್ಯಾ ಸುರೇಶ್ ಸಹಿತ ಹಲವರು ಮಾತನಾಡಿದರು.