ಮಾರಕ ಮಾದಕ ವಸ್ತು ವಶ ಇಬ್ಬರ ಸೆರೆ; ಕಾರು ವಶ

ಕಾಸರಗೋಡು: ಮಾರಕ ಮಾದಕ ವಸ್ತುವಾದ ಮೆಥಾಫಿಟಮಿನ್ ಸಹಿತ ಇಬ್ಬರನ್ನು ಕಾಸರಗೋಡು ರೇಂಜ್ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಚರ್ಲಡ್ಕ ನಿವಾಸಿ ಅಬ್ದುಲ್ ಜವಾದ್ (೨೬), ಪೆರ್ಲ ಅಡ್ಕ ಹೌಸ್‌ನ ಅಬ್ದುಲ್ ಅಸೀಸ್ (೪೧) ಎಂಬಿವರು ಬಂಧಿತ ಆರೋಪಿಗಳಾ ಗಿದ್ದಾರೆ. ಇವರ ಕೈಯಿಂದ ೪.೧೯ ಗ್ರಾಂ ಮೆಥಾಫಿಟಮಿನ್ ಮಾದಕ ವಸ್ತು ಹಾಗೂ ಆರೋಪಿಗಳು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಾಸರಗೋಡು ರೇಂಜ್ ಅಬಕಾರಿ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ತಂಡ ಚೆರ್ಕಳ- ಬದಿಯಡ್ಕ ರಸ್ತೆಯ ಚರ್ಲಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಕಾರನ್ನು ತಡೆದು ನಿಲ್ಲಿಸಿ  ಪರಿಶೀಲಿಸಿದಾಗ ಮಾದಕವಸ್ತು ಪತ್ತೆಯಾಗಿದೆ. ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ ಉಣ್ಣಿಕೃಷ್ಣನ್ ಕೆ, ರಾಮ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಕಣ್ಣನ್ ಕುಂಞಿ, ಮುರಳೀಧರನ್ ಎಂಬಿ ವರಿದ್ದರು.

RELATED NEWS

You cannot copy contents of this page