ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶ ಸಮಿತಿ ರೂಪೀಕರಣ
ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರ ಇದರ ಜೀರ್ಣೋದ್ಧಾರ ಸಮಿತಿ, ಬ್ರಹ್ಮ ಕಲಶ ಸಮಿತಿ ರೂಪೀಕರಣ, ವಿಜ್ಞಾ ಪನಾ ಪತ್ರ ಲೋಕಾರ್ಪಣೆ ಮತ್ತು ನಿಧಿ ಸಂಗ್ರಹಣ ಕಾರ್ಯಕ್ರಮ ಶ್ರೀ ಕ್ಷೇತ್ರ ಸಭಾಂಗಣದಲ್ಲಿ ಜರಗಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾ ನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ, ವಿಜ್ಞಾಪನಾ ಪತ್ರವನ್ನು ಬಿಡುಗಡೆ ಗೊಳಿಸಿ ಆಶೀರ್ವಚನ ನೀಡಿದರು. ಇದೇ ವೇಳೆ ನಿಧಿ ಕುಂಭಕ್ಕೆ ಆವರು ಚಾಲನೆ ನೀಡಿದರು. ನ್ಯಾಯವಾದಿ ದಾಮೋದರ ಎಂ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣ ಮಾಡಿದರು. ಬಳಿಕ ಬ್ರಹ್ಮಕಲಶ ಹಾಗೂ ಜೀರ್ಣೋದ್ಧಾರ ಸಮಿತಿ ರೂಪೀಕರಣ ನಡೆಯಿತು. ವಸಂತ ಪೈ ಬದಿಯಡ್ಕ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶ ಸಮಿತಿ ಗೌರವಾ ಧ್ಯಕ್ಷರಾಗಿಯೂ, ಮಧು ಸೂದನ ಆಯರ್ ಮಂಗಳೂರು ಇವರನ್ನು ಅಧ್ಯಕ್ಷರಾಗಿಯೂ ಕಾರ್ಯಾಧ್ಯಕ್ಷರಾಗಿ ನ್ಯಾಯವಾದಿ ದಾಮೋದರ ಎಂ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯ ವಾದಿ ಶಿವರಾಮ, ಕೋಶಾಧಿಕಾರಿ ಯಾಗಿ ನಾರಾಯಣ ಕೇಕಡ್ಕ, ಕಾರ್ಯದರ್ಶಿಯಾಗಿ ಜಯಕರ ಎಂ ಮಿಂಚಿಪದವು ಎಂಬಿವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಚಿದಾನಂದ ಕೆದಿಲಾಯ, ಸೇವಾ ಸಮಿತಿಯ ಸದಾನಂದ ಅಡ್ಕ, ಚಂದ್ರಶೇಖರ ಎಂ ಎನ್, ರಾಘವ ಎಂ ಎನ್, ರಾಮಚಂದ್ರ ಉಪಸ್ಥಿತರಿ ದ್ದರು. ನ್ಯಾಯವಾದಿ ಶಿವರಾಮ ಮಣಿಯಾಣಿ ಸ್ವಾಗತಿಸಿ, ಮನೋಜ್ ಎಂ ಸಿ ವಂದಿಸಿದರು. ಗಂಗಾಧರ ಕೊಂಡೆಯೂರು ನಿರೂಪಿಸಿದರು. ಆಡಳಿತ ಮೊಕ್ತೇಸರ ಡಿ ವಿ ಕಕ್ಕಿಲ್ಲಾಯ ಕುಟುಂಬಸ್ಥರು ಸಹಕರಿಸಿದರು.