ಮೀಂಜ ಮಂಡಲ ಕಾಂಗ್ರೆಸ್ ವತಿಯಿಂದ ಮೀಯಪದವಿನಲ್ಲಿ ಪ್ರತಿಭಟನೆ

ಮಂಜೇಶ್ವರ: ರಾಜ್ಯದ ಆಡಳಿತವನ್ನು ಮಾಫಿಯಾಗಳ ಕೈಗೊಪ್ಪಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಯುವ ಕಾಂಗ್ರೆಸ್ ರಾಜ್ಯ ಸಮಿತಿ ನಡೆಸಿದ ಸೆಕ್ರೆಟರಿಯೇಟ್ ಮಾರ್ಚ್‌ನಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಿಗೆ ಅಮಾನುಷ ಹಲ್ಲೆಗೈದಿರುವುದನ್ನು ಪ್ರತಿಭಟಿಸಿ ಮೀಂಜ ಮಂಡಲ ಪಂಚಾಯತ್ ಕಾಂಗ್ರೆಸ್ ವತಿಯಿಂದ ಮೀಯಪದವಿನಲ್ಲಿ ನಡೆದ ಪ್ರತಿಭಟನೆಯನ್ನು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಅಧ್ಯಕ್ಷತೆ ವಹಿಸಿದರು. ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷ ಅಹಮ್ಮದ್ ಬಾತಿಷ, ಮುಖಂಡರಾದ ಕಾಯಿಂಞಿಹಾಜಿ ತಲೇಕಳ, ಜೆ. ಮೊಹಮ್ಮದ್, ಉಮ್ಮರ್ ಬೆಜ್ಜ, ಹನೀಫ್ ಎಚ್.ಎ, ಪಳ್ಳಿಕುಂಞಿ, ರೋನಿ ಡಿಸೋಜ, ಮೊಹಮ್ಮದ್ ಉಪಸ್ಥಿತರಿದ್ದರು.

You cannot copy contents of this page