ಮೀನು ಹಿಡಿಯುತ್ತಿದ್ದ ಮಧ್ಯೆ ಹೊಳೆಗೆ ಬಿದ್ದ ಯುವಕ ಕರಾವಳಿ ಪೊಲೀಸರಿಂದ ರಕ್ಷಣೆ
ಕುಂಬಳೆ: ಮೀನು ಹಿಡಿಯುವ ಮಧ್ಯೆ ಕಾಲುಜಾರಿ ಹೊಳೆಗೆ ಬಿದ್ದ ಯುವಕನನ್ನು ಹಾಗೂ ರಕ್ಷಣೆಗಾಗಿ ಹೊಳೆಗೆ ಹಾರಿದ ವ್ಯಕ್ತಿಯನ್ನು ಕರಾವಳಿ ಪೊಲೀಸರು ರಕ್ಷಿಸಿದ್ದಾರೆ. ಮೇಲ್ಪರಂಬ ದೇಳಿ ಜಂಕ್ಷನ್ ನಿವಾಸಿ ಖಾಲಿದ್ (೪೭), ಅಶ್ರಫ್ (೪೭) ಎಂಬಿವರನ್ನು ರಕ್ಷಿಸಲಾಗಿದೆ. ನಿನ್ನೆ ಮುಂಜಾನೆ ೨ ಗಂಟೆ ವೇಳೆ ಕುಂಬಳೆ ಶಿರಿಯ ಹೊಳೆಯ ರೈಲ್ವೇ ಮೇಲ್ಸೇತುವೆಯ ಬಳಿ ಘಟನೆ ನಡೆದಿದೆ.
ಗೆಳೆಯರ ಜೊತೆ ಸೇರಿ ಮೀನು ಹಿಡಿಯಲು ತಲುಪಿದ ಖಾಲಿದ್ ಮೇಲ್ಸೇತುವೆಯಲ್ಲಿ ನಿಂತು ಮೀನು ಹಿಡಿಯುತ್ತಿದ್ದ ವೇಳೆ ಆಯತಪ್ಪಿ ಹೊಳೆಗೆ ಬಿದ್ದಿದ್ದಾರೆ. ಬಳಿಕ ಇವರನ್ನು ರಕ್ಷಿಸಲು ಜೊತೆಗಿದ್ದ ಅಶ್ರಫ್ ಹೊಳೆಗೆ ಹಾರಿದ್ದಾರೆ. ಆದರೆ ಕಾಲಿನ ಸ್ನಾಯುಸೆಳೆತದಿಂದಾಗಿ ಇವರಿಗೆ ದಡ ಸೇರಲು ಸಾಧ್ಯವಾಗಿರಲಿಲ್ಲ. ಈ ವೇಳೆ ದಡದಲ್ಲಿದ್ದ ಇನ್ನೋರ್ವ ಕೂಡಲೇ ಕುಂಬಳೆ ಕರಾವಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಠಾಣೆಯ ಎಎಸ್‌ಐ ಅಸೀಸ್, ಸಿವಿಲ್ ಪೊಲೀಸ್ ರಾದ ಸನೂಪ್, ಜಿತಿನ್, ಸನೂಜ್ ಸೇರಿ ಹೊಳೆ ನೀರಿನಿಂದ ಇಬ್ಬರನ್ನು ರಕ್ಷಿಸಿದ್ದಾರೆ.