ಮುಳಿಯಾರ್‌ನಲ್ಲಿ ಭಾರೀ ಮಾದಕವಸ್ತು ಬೇಟೆ

3,76,830 ರೂ. ಸಹಿತ ಇಬ್ಬರ ಬಂಧನಮುಳ್ಳೇರಿಯ: ಆದೂರು ಪೊಲೀಸರು ಮುಳಿಯಾರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು, ಹಣ ಸಹಿತ ಇಬ್ಬರನ್ನು ಬಂಧಿಸಲಾಗಿದೆ.
ಮುಳಿಯಾರು ಕೋಲಾಚಿಯಡ್ಕ ಕೆಟ್ಟುಂಕಲ್ಲು ಎಂಬಲ್ಲಿನ ಬಿಸ್ಮಿಲ್ಲ ಮಂ ಜಿಲ್ ನಿವಾಸಿ ಮೊಯ್ದು (40), ಕಾರು ಚಾಲಕ ಪಾಡಿ ಎಡನೀರಿನ ಎಂ.ಎA. ರಶೀದ್ (29) ಎಂಬಿವರನ್ನು ಆದೂರು ಎಸ್ಐ ಕೆ. ಅನುರೂಪ್ ನೇತೃತ್ವದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.
ಮನೆ ಬಳಿ ನಿಲ್ಲಿಸಿದ್ದ ಕಾರು ಹಾಗೂ ಮನೆಯ ಬೆಡ್ರೂಂನಲ್ಲಿ ಬ ಚ್ಚಿಡಲಾಗಿದ್ದ 1618 ಪ್ಯಾಕೆಟ್ ತಂಬಾಕು ಉತ್ಪನ್ನಗಳು, 340 ಪ್ಯಾಕೆಟ್ ಸಿಗರೇಟ್ ಗಳನ್ನು ಮೊದಲು ಪತ್ತೆಹಚ್ಚಿ ವಶಪಡಿಸಲಾಗಿದೆ. ನಂತರ ನಡೆಸಿದ ಸಮಗ್ರ ತನಿಖೆ ವೇಳೆ 3,76,830 ರೂಪಾಯಿಗಳನ್ನು ಪತ್ತೆಹಚ್ಚಲಾಗಿದೆ.
ಗುಪ್ತ ಮಾಹಿತಿ ಪ್ರಕಾರ ನಿನ್ನೆ ಸಂಜೆ ವೇಳೆ ಪೊಲೀಸರು ಮೊಯ್ದುವಿನ ಮನೆ ಯಲ್ಲಿ ಶೋಧ ನಡೆಸಿದಾಗ ತಂಬಾಕು ಉತ್ಪನ್ನಗಳು ಹಾಗೂ ಹಣ ಪತ್ತೆಯಾ ಗಿದೆ. ನಿಷೇಧಿತ ತಂಬಾಕು ಉತ್ಪನ್ನ ಗಳನ್ನು ಮಾರಾಟಗೈದು ಲಭಿಸಿದ ಹಣ ಇದಾಗಿದೆಯೆಂದು ಸಂಶಯಿಸಲಾಗು ತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page