ಮೀಯಪದವಿನ ಯುವಕನ ಕೊಲೆ: ತಲೆಮರೆಸಿಕೊಂಡ ಆರೋಪಿಗಳಿಗಾಗಿ ರೆಡ್ ಕಾರ್ನರ್ ನೋಟೀಸ್
ಕುಂಬಳೆ: ಪೊಲೀಸರು ಬಂಧಿಸಿದ ಬಳಿಕ ಸಂಬಂಧಿಕ ಜಾಮೀನಿನಲ್ಲಿ ಬಿಡು ಗಡೆಗೊಳಿಸಿ ಕರೆದೊಯ್ದ ಯುವಕನನ್ನು ತಂಡ ಹಲ್ಲೆಗೈದು ಕೊಲೆಗೈದ ಪ್ರಕರಣದ ತನಿಖೆಗಾಗಿ ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜೀವ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಕೊಲೆ ಪ್ರಕರಣಗಳ ಸಹಿತ ಅಪರಾಧ ಕೃತ್ಯಗಳನ್ನು ಬೇಧಿಸಿ ಪರಿಣತಿ ಯುಳ್ಳ ಪೊಲೀಸ್ ಅಧಿಕಾರಿಗಳನ್ನು ಈ ತಂಡದಲ್ಲಿ ಸೇರಿಸಲಾಗಿದೆ.
ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರೀಫ್ (೨೨)ನ ಕೊಲೆ ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ. ಮಾರ್ಚ್ ೪ರಂದು ರಾತ್ರಿ ಗಾಂಜಾ ಮತ್ತಿನಲ್ಲಿ ಬೊಬ್ಬೆ ಹಾಕುತ್ತಿದ್ದ ಮೊಯ್ದೀ ನ್ ಆರೀಫ್ನನ್ನು ನಾಗರಿಕರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ಸೆರೆ ಹಿಡಿದಿದ್ದರು. ಅಂದು ರಾತ್ರಿಯೇ ಆತನನ್ನು ಸಹೋದರಿಯ ಪತಿ ಕಣ್ವತೀರ್ಥ ಇರ್ಶಾದ್ ಮಂಜಿಲ್ನ ಅಬ್ದುಲ್ ರಶೀದ್ ಜಾಮೀನಿನಲ್ಲಿ ಬಿಡು ಗಡೆಗೊಳಿಸಿ ಕರೆದೊಯ್ದಿದ್ದನು. ಅನಂತರ ಮೊಯ್ದೀನ್ ಆರೀಫ್ನನ್ನು ಬೈಕ್ನಲ್ಲಿ ಕರೆದೊಯ್ದು ತೂಮಿನಾಡು ಮೈದಾನಕ್ಕೆ ತಲುಪಿಸಿ ತಂಡ ಪೈಶಾಚಿಕ ರೀತಿಯಲ್ಲಿ ಹಲ್ಲೆಗೈದು ಬಳಿಕ ಮನೆಗೆ ತಲುಪಿಸಿತ್ತು. ಮರುದಿನ ಬೆಳಿಗ್ಗೆ ರಕ್ತ ವಾಂತಿ ಮಾಡಿದ ಹಿನ್ನೆಲೆಯಲ್ಲಿ ಮೊಯ್ದೀನ್ ಆರೀಫ್ ನನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗ ಲಿಲ್ಲ. ಸಹಜ ಸಾವೆಂದು ಭಾವಿಸಿ ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ನಡೆಸುತ್ತಿರು ವಾಗಲೇ ಮೃತದೇಹದಲ್ಲಿ ಗಾಯಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ತಂಡ ನಡೆಸಿದ ಹಲ್ಲೆಯೇ ಯುವಕನ ಸಾವಿಗೆ ಕಾರಣವೆಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ೯ ಮಂದಿ ವಿರುದ್ಧ ಕೇಸು ದಾಖಲಿಸಿ ಆರೋಪಿಗಾದ ಕಣ್ವತೀರ್ಥ ಇರ್ಶಾದ್ ಮಂಜಿಲ್ನ ಅಬ್ದುಲ್ ರಶೀದ್ (೨೮) ಕುಂಜತ್ತೂರು ಕಣ್ವತೀರ್ಥ ರೈಲ್ವೇಗೇಟ್ ಬಳಿಯ ನಿವಾಸಿಗಳಾದ ಶೌಕತ್ತಲಿ (೩೯), ಅಬೂಬಕರ್ ಸಿದ್ಧಿಕ್ (೩೩) ಎಂಬಿವರನ್ನು ಬಂಧಿಸಿದ್ದಾರೆ. ಇವರು ಇದೀಗ ರಿಮಾಂಡ್ನಲ್ಲಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಆರು ಮಂದಿ ಸೆರೆಗೀಡಾಗಲು ಬಾಕಿ ಇದ್ದಾರೆ. ಈ ಪೈಕಿ ಇಬ್ಬರು ಗಲ್ಫ್ಗೆ ಪರಾರಿಯಾಗಿರುವುದಾಗಿ ಖಚಿತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪತ್ತೆಹಚ್ಚಲು ರೆಡ್ ಕಾರ್ನರ್ ನೋಟೀಸು ಬಿಡುಗಡೆಗೊಳಿಸಲು ಪ್ರತ್ಯೇಕ ತನಿಖಾ ತಂಡ ನಿರ್ಧರಿಸಿದೆ. ನೋಟೀಸು ಬಿಡುಗಡೆಗೊಳಿಸಿದ ಬಳಿಕ ಇಂಟರ್ಪೋಲ್ ಸಹಾಯದೊಂದಿಗೆ ಆರೋಪಿಗಳನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಇತರ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಬೆಂಗಳೂರು ಹಾಗೂ ಮತ್ತಿಬ್ಬರು ಗೋವಾ ದಲ್ಲಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.