ಪಾಲ್ಘಾಟ್‌ನಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ : ಮೂವರು ಅಭ್ಯರ್ಥಿಗಳೂ ಗೆಲುವಿನ ನಿರೀಕ್ಷೆಯಲ್ಲಿ

ಪಾಲಕ್ಕಾಡ್: ಕೇರಳದ ೨೦ ಲೋಕಸಭಾ ಕ್ಷೇತ್ರಗಳ ಪೈಕಿ ಪಾಲ್ಘಾಟ್ ಲೋಕಸಭಾ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ನಡುವೆ ಪ್ರಬಲ ಪೈಪೋಟಿ ಏರ್ಪ ಟ್ಟಿದೆ.  ಈ ಲೋಕಸಭಾ ಕ್ಷೇತ್ರದಲ್ಲಿ ಪಟ್ಟಾಂಬಿ, ಶೊರ್ನೂರು, ಒಟ್ಟಪಾ ಲಂ, ಮಲಂಪುಳ, ಮಣ್ಣಾರ ಕ್ಕಾಡ್ ಮತ್ತು ಕೊಂಗಾಡ್ ವಿಧಾನ ಸಭಾ ಕ್ಷೇತ್ರ ಗಳು ಒಳಗೊಂಡಿವೆ.  ೧೯೫೭ರಲ್ಲಿ ಈ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ.

 ೨೦೧೯ರ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ (ಯುಡಿಎಫ್) ನ ವಿ.ಕೆ. ಶ್ರೀಕಂಠನ್ ೩,೯೯,೨೭೪ (ಶೇ. ೩೯.೧೭) ಮತಗಳಿಸಿ ೧೧,೬೩೭ ಮತಗಳ ಅಂತರದಲ್ಲಿ  ಗೆಲುವು  ಸಾಧಿಸಿದ್ದಾರೆ. ಸಿಪಿಎಂ (ಎಡರಂಗ)ನ ಎಂ.ಬಿ. ರಾಜೇಶ್‌ರಿಗೆ ೩,೮೭,೬೩೭ (ಶೇ. ೨೧.೪೪) ಮತ್ತು ಬಿಜೆಪಿ (ಎನ್‌ಡಿಎ)ಯ ಸಿ. ಕೃಷ್ಣ ಕುಮಾರ್‌ರಿಗೆ ೨,೧೮,೫೫೬ (ಶೇ. ೨೧.೪೧) ಮತಗಳು ಲಭಿಸಿದ್ದವು.

೨೦೧೪ರಲ್ಲಿ ಈ ಕ್ಷೇತ್ರದಲ್ಲಿ ಸಿಪಿ ಎಂನ ಎಂ.ಬಿ. ರಾಜೇಶ್ ೧,೦೫,೩೦೦ ಮತಗಳ   ಅಂತರದಲ್ಲಿ ಗೆದ್ದಿದ್ದರು.

೨೦೦೯ರಲ್ಲಿ ಸಿಪಿಎಂನ  ಇದೇ ರಾಜೇಶ್ ೧೮೨೦ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.  ೧೯೯೧ರಲ್ಲಿ  ಕಾಂಗ್ರೆಸ್‌ನ ವಿ.ಎಸ್. ವಿಜಯ ರಾಘವನ್, ೧೯೮೯ರಲ್ಲಿ ಸಿಪಿಎಂನ ಎ. ವಿಜಯ ರಾWವನ್, ೧೯೮೦ ಮತ್ತು ೧೯೮೪ರಲ್ಲಿ ಕಾಂಗ್ರೆಸ್‌ನ ವಿ.ಎಸ್. ವಿಜಯ ರಾಘವನ್ ಗೆದ್ದಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ವಿ.ಕೆ. ಶ್ರೀಕಂಠನ್, ಸಿಪಿಎಂನ ಎ. ವಿಜಯರಾಘವನ್ ಮತ್ತು ಬಿಜೆಪಿಯ ಸಿ. ಕೃಷ್ಣ ಕುಮಾರ್ ಸ್ಪರ್ಧಾಕಣದಲ್ಲಿದ್ದಾರೆ. ಈ ಮೂವರೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

೨೦೧೯ರ ಚುನಾವಣೆಯಲ್ಲಿ ಬಿಜೆಪಿ  ತೃತೀಯ ಸ್ಥಾನದಲ್ಲಿ ತೃಪ್ತಿಪಡಬೇಕಾಗಿ ಬಂದರೂ ಈ ಬಾರಿ ಪ್ರಧಾನಿ ನರೇಂದ್ರಮೋದಿ ಯವರ ಪ್ರಭಾವದಿಂದ ಇಲ್ಲಿ   ನಮ್ಮ ಗೆಲುವು ಖಚಿತ ಎಂಬ  ನಿರೀಕ್ಷೆಯನ್ನು ಬಿಜೆಪಿ ಉಮೇದ್ವಾರ ಕೃಷ್ಣ ಕುಮಾರ್ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪಾಲ್ಘಾಟ್‌ನಲ್ಲಿ ಪ್ರಧಾನಿ ನರೇಂದ್ರಮೋದಿಯವರು ಈ ತಿಂಗಳ ೧೯ರಂದು ರೋಡ್‌ಶೋ ನಡೆಸಿದ್ದು, ಅದು ಬಿಜೆಪಿಯ ಗೆಲುವಿನ ನಿರೀಕ್ಷೆ ಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆಯೆಂದು ಅವರು ಹೇಳುತ್ತಿದ್ದಾರೆ. ಕೇರಳದಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಹೊಂದಿರುವ ಕ್ಷೇತ್ರಗಳಲ್ಲೊಂದಾಗಿದೆ ಪಾಲ್ಘಾಟ್.

ಇದೇ ವೇಳೆ ನನ್ನ ಗೆಲುವು ಖಚಿತ. ಅದನ್ನು ಯಾರೂ ತಡೆಯುವಂತಿಲ್ಲವೆಂಬ ದೃಢ ನಂಬಿಕೆಯನ್ನು ಹಾಲಿ ಸಂಸದ ಕಾಂಗ್ರೆಸ್‌ನ ವಿ.ಕೆ. ಶ್ರೀಕಂಠನ್ ವ್ಯಕ್ತಪಡಿಸಿದ್ದಾರೆ.

ಪಾಲ್ಘಾಟ್ ಎಡರಂಗದ ಭದ್ರಕೋಟೆಗಲ್ಲೊಂದಾಗಿದೆ. ಇಲ್ಲಿ ಸಿಪಿಎಂ ಈ ಹಿಂದೆ ಹಲವು ಬಾರಿ ಗೆದ್ದಿತ್ತು.  ಈ ಹಿಂದೆ ನನಗೆ ಒಲಿದಿದ್ದ ಕ್ಷೇತ್ರವಾಗಿದೆ ಇದು. ಆದ್ದರಿಂದ ಆ ಗೆಲುವು ಮರುಕಳಿಸಲಿದೆಯೆಂಬ ನಿರೀಕ್ಷೆಯನ್ನು ಸಿಪಿಎಂ ಉಮೇದ್ವಾರ ವಿಜಯ ರಾಘವನ್ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page