ಮುರಿದುಬಿದ್ದ ಜನರಲ್ ಆಸ್ಪತ್ರೆ ಅಂಗಳದ ಬೃಹತ್ ಮಾವಿನ ಮರದ ರೆಂಬೆ : ತಪ್ಪಿದ ಅಪಾಯ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ಅಂಗಳದಲ್ಲಿ ಹಲವು ವರ್ಷ ಹಳೆಯದಾದ ಬೃಹತ್ ಮಾವಿನಮರದ ದೊಡ್ಡ ಗೆಲ್ಲೊಂದು ಮುರಿದುಬಿದ್ದಿದೆ. 

ಮರದ ಅಡಿಯಲ್ಲಿದ್ದವರು ಓಡಿ ಹೋದ ಕಾರಣ ದುರಂತ ತಪ್ಪಿಹೋಗಿದೆ. ಇಂದು ಬೆಳಿಗ್ಗೆ ೮ ಗಂಟೆ ವೇಳೆ ಘಟನೆ ನಡೆದಿದೆ. ಮರದ ಬೃಹತ್ ರೆಂಬೆ ಮುರಿಯುವ ಸದ್ದು ಕೇಳಿ  ಸೆಕ್ಯೂರಿಟಿ ಗಾರ್ಡ್, ನೌಕರರು ಮರದಡಿ ಯಿಂದ ಪಾರಾಗಲು ಎಚ್ಚರಿಸಿದ್ದಾರೆ.  ಅರ್ಧ ಮುರಿದ ರೆಂಬೆ ದಿಢೀರ್ ಆಗಿ ಬೀಳದೆ ಮೆಲ್ಲನೆ ಕುಸಿದು ಬಿದ್ದಿರುವ ಕಾರಣ ಮರದಡಿಯಲ್ಲಿದ್ದವರು ತಪ್ಪಿಸಲು ಸಮಯಾವಕಾಶ ಲಭಿಸಿದೆ.  ಮರದಡಿಯಲ್ಲಿ ನಿಲ್ಲಿಸಿದ್ದ ಆಂಬುಲೆನ್ಸ್ ಸಹಿತದ ವಾಹನಗಳನ್ನು ಈ ವೇಳೆ ಅಲ್ಲಿಂದ ತೆರವುಗೊಳಿ ಸಿರುವುದು ನಾಶನಷ್ಟವಿಲ್ಲದಂತೆ ಮಾಡಿದೆ.

RELATED NEWS

You cannot copy contents of this page