ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ 100 ಶೇ. ಸಾಧನೆ
ಮುಳ್ಳೇರಿಯ: ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ಅಕೌಂಟಿAಗ್ ಎಕ್ಸಿಕ್ಯೂಟಿವ್, ರಿಟೈಲ್ ಸೇಲ್ಸ್ ಅಸೋಸಿಯೇಟ್ ಎಂಬೀ ಎರಡು ವೊಕೇಶನಲ್ ವಿಷಯಗಳಲ್ಲಿ 60 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 5 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗಳಿಸಿದ್ದಾರೆ. ಕಣ್ಣೂರು, ಕಾಸರಗೋಡು ಜಿಲ್ಲೆ ಒಳಗೊಂಡ ಪಯ್ಯನ್ನೂರು ರೀಜ್ಯನಲ್ನಲ್ಲಿಯೇ ಅತ್ಯಂತ ಹೆಚ್ಚು ಮಕ್ಕಳು ಎಲ್ಲಾ ವಿಷಯದಲ್ಲೂ ಎಪ್ಲಸ್ ಗಳಿಸಿರುವುದು ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಿಂದಾಗಿದೆ. ಜಿಲ್ಲೆಯಲ್ಲಿ 1225 ಮಕ್ಕಳು ಪರೀಕ್ಷೆ ಬರೆದಿದ್ದು, 751 ಮಕ್ಕಳು ಜಯಗಳಿಸಿದ್ದಾರೆ. ಒಟ್ಟು 61.31 ಶೇ. ಫಲಿತಾಂಶ ಬಂದಿದೆ. 15 ಮಂದಿ ಎಲ್ಲಾ ವಿಷಯಗಳಲ್ಲೂ ಎಪ್ಲಸ್ ಗಳಿಸಿದ್ದಾರೆ. ಕುಂಜತ್ತೂರು ಶಾಲೆಯಲ್ಲೂ 100 ಶೇ. ಸಾಧನೆ ಕಂಡುಬAದಿದೆ.