ಮೋದಿಯ ಔದಾರ್ಯದಿಂದ ಮುಂದುವರಿಯುತ್ತಿರುವ ಪಿಣರಾಯಿ ಸರಕಾರ- ಪಿ.ಕೆ. ಫೈಸಲ್
ಕಾಸರಗೋಡು: ಜನಕ್ಷೇಮ ಚಟುವಟಿಕೆಗಳನ್ನು ಜ್ಯಾರಿಗೊಳಿಸುವುದರಲ್ಲಿ ಸಂಪೂರ್ಣ ಪರಾಜಯಗೊಂಡ ಮುಖ್ಯಮಂತ್ರಿಯನ್ನು ಪ್ರೋತ್ಸಾಹಿಸಲು ಪಕ್ಷದ ಮುಖಂಡರು, ಸಚಿವರು ಸ್ಪರ್ಧಿಸಿ ವ್ಯಕ್ತಿಪೂಜೆ ನಡೆಸುತ್ತಿದ್ದಾರೆಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಭಿಪ್ರಾಯ ಪಟ್ಟರು. ಬಡ ಜನರನ್ನು ವಂಚಿಸಲು ನಡೆಸಿದ ನವ ಕೇರಳ ಸಭೆಯಲ್ಲಿ ಲಭಿಸಿದ ಲಕ್ಷಾಂತರ ದೂರುಗಳಲ್ಲಿ ಸರಕಾರ ಯಾವುದೇ ಕ್ರಮ ಇದುವರೆಗೆ ಸ್ವೀಕರಿಸಲಿಲ್ಲ. ಚಿನ್ನ ಕಳ್ಳ ಸಾಗಾಟ ಮುಖ್ಯಮಂತ್ರಿಯ ಕಚೇರಿಯನ್ನು ಕೇಂದ್ರೀಕರಿಸಿ ಆಗಿದೆ ಎಂದು ಪ್ರಧಾನಮಂತ್ರಿ ಬಹಿರಂಗಗೊಳಿಸಿ ಕ್ರಮ ಕೈಗೊಳ್ಳದಿರುವುದು ಕೇಂದ್ರದೊಂದಿಗಿರುವ ಪರಸ್ಪರ ಹೊಂದಾಣಿಕೆಯಿಂದಾಗಿದೆ ಎಂದು, ಮೋದಿಯ ಔದಾರ್ಯದಿಂದ ಮಾತ್ರವೇ ಪಿಣರಾಯಿ ಸರಕಾರದ ಆಡಳಿತ ಮುಂದುವರಿಯುತ್ತಿದೆ ಎಂದು ಫೈಸಲ್ ನುಡಿದರು. ಕಾಸರಗೋಡು ಬ್ಲೋಕ್ ಕಾಂಗ್ರೆಸ್ ಸಮಿತಿಯ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಎಂ. ರಾಜೀವನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಅಧ್ಯಕ್ಷ ಪಿ.ಎ. ಅಶ್ರಫಲಿ, ಮುಖಂಡರಾದ ಎ. ಗೋವಿಂದನ್ ನಾಯರ್, ಕರುಣಾ ತಾಪ ಸಹಿತ ಹಲವರು ಭಾಗವಹಿಸಿದರು.