ಯುಡಿಎಫ್, ಎಲ್‌ಡಿಎಫ್‌ನ ಇಂಡಿಯಾ ಒಕ್ಕೂಟದ ತಂತ್ರ ಪರಾಭವ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮೂರನೇ ಬಾರಿಯೂ ಸಹಕಾರ ಭಾರತಿಗೆ
ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಆಡಳಿತವನ್ನು ಮೂರನೇ ಬಾರಿಯೂ ಉಳಿಸಿಕೊಂಡು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಾಧನೆಗೈದಿದೆ.
ಸೇವಾ ಸಹಕಾರಿ ಒಕ್ಕೂಟ ಎಂಬ ಹೆಸರಲ್ಲಿ ಯುಡಿಎಫ್ ಹಾಗೂ ಎಲ್‌ಡಿಎಫ್ ಜೊತೆಯಾಗಿ ಸ್ಪರ್ಧಿಸಿ ದರೂ ಗೆಲುವುಸಾಧಿಸಲು ಸಾಧ್ಯವಾಗ ಲಿಲ್ಲ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳನ್ನು ಎದುರಿಸಲು ಸಾಮರ್ಥ್ಯವುಳ್ಳ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲು ಸಾಧ್ಯವಾಗದಿರುವುದೇ ಸೇವಾ ಸಹಕಾರಿ ಒಕ್ಕೂಟ ಸೋಲಿಗೆ ಕಾರಣವಾಗಿದೆ ಯೆನ್ನಲಾಗುತ್ತಿದೆ.
ನಿನ್ನೆ ನಡೆದ ಚುನಾವಣೆಯಲ್ಲಿ ಚಲಾವಣೆಗೊಂಡ 2700ರಷ್ಟು ಮತಗಳ ಪೈಕಿ 1800ಕ್ಕೂ ಹೆಚ್ಚು ಮತಗಳನ್ನು ಸಹಕಾರ ಭಾರತಿ ಪಡೆದು ಮೇಲುಗೈ ಸಾಧಿಸಿರುವುದು ಗಮನಾರ್ಹವಾಗಿದೆ. ಸಾರ್ವಜನಿಕ ಚುನಾವಣೆಯ ರೀತಿ ಯಲ್ಲಿ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಬ್ಯಾಂಕ್‌ನಲ್ಲಿ ಸದಸ್ಯರಾದ ವರನ್ನು ಮತಗಟ್ಟೆಗೆ ತಲುಪಿಸಲು ಎರಡೂ ಒಕ್ಕೂಟಗಳು ಭಾರೀ ಪ್ರಯತ್ನ ನಡೆಸಿವೆ. ಮತದಾರರು ಮತ ಚಲಾಯಿಸಲು ಆಸಕ್ತಿ ವಹಿಸದಿರುವುದು ಮತದಾನ ಶೇಕಡಾವಾರು ಕಡಿತ ವಾಗಲು ಕಾರಣವಾಯಿತು. 5000ಕ್ಕೂ ಹೆಚ್ಚು ಸದಸ್ಯರು ಮತ ಚಲಾಯಿಸಲು ತಲುಪಿದ್ದಾರೆಂದು ಒಕ್ಕೂಟಗಳು ನಿರೀಕ್ಷಿಸಿದ್ದರೂ ಅಷ್ಟೊಂದು ಮಂದಿ ತಲುಪಿಲ್ಲ. ಇದು ಇಂಡಿಯಾ ಒಕ್ಕೂಟದ ದಯನೀಯ ಸೋಲಿಗೆ ಕಾರಣವಾಯಿತು.
ನಿನ್ನೆ ಬೆಳಿಗ್ಗೆ ಮತದಾರರ ಭಾರೀ ಸಂದಣಿ ಕಂಡುಬಂದಿತ್ತು. ಕಳೆದ ಬಾರಿ ಯುಡಿಎಫ್‌ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ಇದರಿಂದ ಒಂದು ವಿಭಾಗ ಸಹಕಾರ ಭಾರತಿಗೆ ಬೆಂಬಲ ಸೂಚಿಸಿತ್ತು. ಇದರಿಂದ ಸಹಕಾರ ಭಾರತಿಗೆ ಗೆಲುವು ಸಾಧಿಸಲು ಸುಲಭವಾಯಿತು. ಆದರೆ ಈ ಬಾರಿ ಆಡಳಿತವನ್ನು ಕಸಿದುಕೊಳ್ಳಲು ಯುಡಿಎಫ್ ಹಾಗೂ ಎಲ್‌ಡಿಎಫ್ ನಡೆಸಿದ ಪ್ರಯತ್ನ ವಿಫಲಗೊಂಡಿತು. ಒಟ್ಟು 11 ಸ್ಥಾನಗಳಿಗೆ ಎರಡೂ ಒಕ್ಕೂಟಗಳಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1952ರಲ್ಲಿ ಕುಂಬಳೆಯ ಬಾಬುರಾಯ ಭಟ್‌ರ ನೇತೃತ್ವದಲ್ಲಿ ಸಹಕಾರ ಭಾರತಿ ಅಸ್ತಿತ್ವಕ್ಕೆ ಬಂದಿತ್ತು.