ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಯುವಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದೇಲಂಪಾಡಿ ನಿವಾಸಿ ಕಮಲ ಎಂಬವರ ಪತ್ರ ಸುದೀಪ್ (20) ಮೃತ ಯುವಕ. ನಿನ್ನೆ ಸಂಜೆಯಿಂದ ಸುದೀಪ್ ನಾಪತ್ತೆಯಾಗಿದ್ದರೆ ನ್ನಲಾಗಿದೆ. ಮನೆಯವರು ಹುಡು ಕಾಡುತ್ತಿದ್ದಾಗ ರಾತ್ರಿ 10 ಗಂಟೆ ವೇಳೆ ಮನೆ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಹಗ್ಗ ತುಂಡರಿಸಿ ಕಾಸರ ಗೋಡಿನ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸಾವು ಸಂಭವಿಸಿದೆ.
ಮೃತರು ಸಹೋದರರಾದ ಸಂತೋಷ್, ಸಂದೀಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.