ಮೋದಿ, ರಾಹುಲ್ ಗಾಂಧಿಯಿಂದ ರೋಡ್ ಶೋ ರಾಜ್ಯದಲ್ಲಿ ಬಿರುಸಿನ ಪ್ರಚಾರ ಆರಂಭ

ತಿರುವನಂತಪುರ: ಕೇರಳದಲ್ಲಿ ಲೋಕಸಭಾ ಚುನಾವಣೆಗೆ ದಿನಗಳು ಮಾತ್ರವೇ ಉಳಿದುಕೊಂಡಿರು ವಂತೆಯೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಪರಾಕಾಷ್ಠೆಗೇರಿದೆ.

ಇದರಂತೆ ಎನ್‌ಡಿಎ ಚುನಾ ವಣಾ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ   ಮೈಸೂರಿನಿಂದ ವಿಮಾನ ಮಾರ್ಗವಾಗಿ ನಿನ್ನೆ ರಾತ್ರಿಯೇ ಕೊಚ್ಚಿಗೆ ಆಗಮಿಸಿ ಎರ್ನಾಕುಳಂ ಸರಕಾರಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದ ಇಂದು ಬೆಳಿಗ್ಗೆ ರಾಜ್ಯದಲ್ಲೂ  ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

 ಆಲತ್ತೂರು ಲೋಕಸಭಾ ಕ್ಷೇತ್ರದ ಕುನ್ನಂಕುಳಂನಲ್ಲಿ ಇಂದು ಬೆಳಿಗ್ಗೆ ರೋ ಡ್‌ಶೋ ನಡೆಸಿದ ಪ್ರಧಾನಿ ಮೋದಿ ಬಳಿಕ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ದರು.  ನಂತರ ಅವರು ಅಲ್ಲಿಂದ ಅಟ್ಟಿಂಗಾಲ್ ಲೋಕಸಭಾ  ಕ್ಷೇತ್ರದ ಕಾಟಾಕಡದಲ್ಲಿ ನಡೆಯುವ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲೂ ಭಾಗವಹಿಸಿ ಮಾತನಾಡುವರು. ಜನವರಿ ತಿಂಗಳಿಂದ ಪ್ರಧಾನಿ ಕೇರಳಕ್ಕೆ ಆಗಮಿಸುತ್ತಿರುವುದು ಇದು ೭ನೇ ಬಾರಿಯಾಗಿದೆ. ರಾಜ್ಯದಲ್ಲಿ ಇಂದು ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಸಂಜೆ ತಮಿಳುನಾಡಿಗೆ ತೆರಳುವರು. ಸಂಜೆ ೪.೧೫ಕ್ಕೆ ತಿರುನಲ್ವೇಲಿ ಯಲ್ಲಿ ನಡೆಯುವ ಎನ್‌ಡಿಎ ಚುನಾವಣಾ ಪ್ರಚಾರಸಭೆಯಲ್ಲೂ ಭಾಗವಹಿಸಿ ಮಾತನಾಡುವರು.

ಇನ್ನೊಂದೆಡೆ ದ್ವಿತೀಯ ಹಂತದ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡಿಗೆ ಆಗಮಿಸಿದ್ದಾರೆ.ಇಂದು ಬೆಳಿಗ್ಗೆ  ನೀಲಗಿರಿ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಮೈದಾನದಲ್ಲಿ ಹೆಲಿಕಾಫ್ಟರ್‌ನಲ್ಲಿ ಬಂದಿಳಿದ ಅವರು ಯುಡಿಎಫ್‌ನ ಆರು ಚುನಾವಣಾ ಸಭೆಗಳಲ್ಲಿ ಭಾಗವಹಿ ಮಾತ್ರನಾಡುವರಲ್ಲದೆ,   ರೋಡ್ ಶೋ ಕೂಡಾ ನಡೆಸುವರು. ಬತ್ತೇರಿ, ಮಾನಂತವಾಡಿ, ವೆಳ್ಳಮುಂಡ ಮತ್ತು ಪಡಿಙಾರಕ್ಕರ ಎಂಬೆಡೆಗಳಲ್ಲಿ  ಅವರು ರೋಡ್ ಶೋ ನಡೆಸಿದ ಬಳಿಕ ಪುದು ಪ್ಪಳ್ಳಿಯಲ್ಲಿ ನಡೆಯುವ ರೈತ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದರ ಹೊರತಾಗಿ ಇಂದು ಅಪರಾಹ್ನ ಮಾನಂತವಾಡಿ ಬಿಶಪ್‌ರನ್ನೂ ಅವರು ಸಂದರ್ಶಿಸುವರು. ಸಂಜೆ ಕಲ್ಲಿಕೋಟೆ ಯಲ್ಲಿ ನಡೆಯುವ ಯುಡಿಎಫ್‌ನ ರ‍್ಯಾಲಿಯಲ್ಲೂ ಅವರು ಭಾಗವಹಿಸಿ ಮಾತನಾಡುವರು. ಇನ್ನೊಂದೆಡೆ ಸಿಪಿಎಂನ ಕೇಂದ್ರ ನೇತಾರರೂ ಇಂದಿನಿಂದ ಎಪ್ರಿಲ್ ೨೩ರ ತನಕ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುವ ಎಡರಂಗ ಚುನಾವಣಾ ಪ್ರಚಾರಸಭೆ ಗಳಲ್ಲೂ ಭಾಗವಹಿಸಿ ಮಾತನಾಡುವರು. ಇದರಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚ್ಚೂರಿ, ಪೋಲಿಟ್ ಬ್ಯೂರೋ ಸದಸ್ಯರಾದ  ಪ್ರಕಾಶ್ ಕಾರಾಟ್, ವೃಂದಾ ಕಾರಾಟ್, ತಪನ್ ಸೇನ್, ಶುಭಾಷಿನಿ ಅಲಿ,  ವಿಜು ಕೃಷ್ಣನ್ ಮೊದ ಲಾದವರು ರಾಜ್ಯದ ವಿವಿಧ ಜಿಲ್ಲೆಗಳ ಲ್ಲಾಗಿ ಎಡ ರಂಗದ ಚುನಾವಣಾ ಸಭೆಗಳಲ್ಲಿ ಭಾಗ ವಹಿಸುವರು. ಇದರ ಹೊರತಾಗಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ರಾಜ್ಯ ಕಾರ್ಯ ದರ್ಶಿ ಎಂ.ವಿ. ಗೋವಿಂದನ್, ಎಂ.ಎ. ಬೇಬಿ ಸೇರಿದಂತೆ ಸಿಪಿಎಂನ ಇತರ ಹಲವು ನೇತಾರರೂ ಚುನಾವಣಾ ಪ್ರಚಾರ ಪರ್ಯ ಟನೆಗಳಲ್ಲಿ ಈಗಾಗಲೇ ತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page