ಯುವಕ-ಯುವತಿ ನಾಪತ್ತೆಯಾದ ಘಟನೆ : ಬದಿಯಡ್ಕದಲ್ಲಿ ನಾಟಕೀಯ ವಿದ್ಯಾಮಾನ
ಬದಿಯಡ್ಕ: ಇಂಟರ್‌ವ್ಯೂಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ ಯುವತಿ ನಾಪತ್ತೆಯಾಗಿದ್ದಾಳೆ. ನಾಪತ್ತೆಯಾದ ಯುವತಿ ಹಾಗೂ ಒಟ್ಟಿಗೆ ಕಲಿತ ಯುವಕನ ಮಧ್ಯೆ ಮದುವೆ ನಡೆಸುವ ಸಂಬಂಧ ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಟೀಸು ಲಗತ್ತಿಸಲಾಗಿದೆ. ತಂದೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನೆಕ್ರಾಜೆ ಕೋಳಾರಿ ನಿವಾಸಿ ನೇಹ (25), ನೆಕ್ರಾಜೆ ಮಾಳಂಗೈಯ ಮಿರ್ಶಾದ್ (25) ಎಂಬವರು ನಾಪತ್ತೆಯಾಗಿದ್ದಾರೆ. ಯುವತಿ ಕಾಸರಗೋಡಿನ ಸಂಸ್ಥೆಯೊಂದರಲ್ಲಿ ಅಧ್ಯಾಪಿಕೆಯಾಗಿದ್ದಾಳೆ. ಆದರೆ ಯುವಕ ನಾಪತ್ತೆಯಾದ ಬಗ್ಗೆ ದೂರು ನೀಡಿಲ್ಲ. ಇದೇ ವೇಳೆ ಯುವಕ-ಯುವತಿ ನಾಪತ್ತೆಯಾದ ಘಟನೆ ಬದಿಯಡ್ಕ ಪೊಲೀಸ್ ಠಾಣೆ ಪರಿಸರದಲ್ಲಿ ನಾಟಕೀಯ ವಿದ್ಯಾಮಾನಗಳಿಗೆ ಕಾರಣವಾಯಿತು. ಯುವತಿ ನಾಪತ್ತೆಯಾದ ಬಗ್ಗೆ ವಿಷಯ ತಿಳಿದು ತಂಡವೊಂದು ತಲುಪಿರುವುದು ನಾಟಕೀಯ ವಿದ್ಯಾಮಾನಗಳಿಗೆ ಕಾರಣವಾಗಿದೆ. ಪೊಲೀಸರು ಪಕ್ಷಪಾತವಾಗಿ ವರ್ತಿಸಿದರೆಂಬ ಆರೋಪವೇ ವಾಗ್ವಾದ, ಗದ್ದಲಕ್ಕೆ ಕಾರಣವಾಯಿತು. ಆದರೆ ಗದ್ದಲಕ್ಕೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿಲ್ಲ. ಯಾರೂ ದೂರು ನೀಡದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಕೇಸು ದಾಖಲಿಸಿಲ್ಲವೆಂದು ಹೇಳಲಾಗುತ್ತಿದೆ.
ಯುವತಿ ನಾಪತ್ತೆಯಾದ ದೂರಿನಂತೆ ಕೇಸು ದಾಖಲು