ಯೋಜನೆಗಳು ಹಲವು: ಬತ್ತಿದ ಆನೆಕಲ್ಲು ಹೊಳೆ; ವರ್ಕಾಡಿ ಪಂ.ನಲ್ಲಿ ಕುಡಿಯುವ ನೀರು ಕೊರತೆ
ಮಂಜೇಶ್ವರ: ಬೇಸಿಗೆಯ ತೀವ್ರತೆ ಹೆಚ್ಚಿರುವಂತೆ ಆನೆಕಲ್ಲು ಕುಡಿಯುವ ನೀರು ಯೋಜನೆಯ ಚಟುವಟಿಕೆ ತಾಳತಪ್ಪಿದೆ. ಇದರೊಂದಿಗೆ ವರ್ಕಾಡಿ ಪಂಚಾಯತ್ ನಿವಾಸಿಗಳು ತೀವ್ರ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ವರ್ಕಾಡಿ, ಮಂಜೇಶ್ವರ ಪಂಚಾಯತ್‌ಗಳಲ್ಲಿ ಕುಡಿಯುವ ನೀರು ವಿತರಿಸುವುದು ಆನೆಕಲ್ಲು ಯೋಜನೆಯಲ್ಲಾಗಿದೆ.
ಕುಡಿಯುವ ನೀರು ವಿತರಣೆ ಯೋಜನೆಯನ್ನು ೨೦೧೧ರಲ್ಲಿ ಆರಂಭಿಸಲಾಗಿದೆ. ಕೇರಳ -ಕರ್ನಾಟಕ ಗಡಿಯಾದ ಆನೆಕಲ್ಲು ಹೊಳೆಯಿಂದ ಪೈಪ್ ಮೂಲಕ ನೀರು ವಿತರಿಸಲಾ ಗುತ್ತಿದೆ. ಇದಕ್ಕಾಗಿ ಹೊಳೆ ಬದಿಯಲ್ಲಿ ಪಂಪ್ ಹೌಸ್, ಜಲ ಸಂಗ್ರಹಗಾರವನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಂಗ್ರಹಿಸುವ ನೀರನ್ನು ಗುವೆದಪಡ್ಪುವಿಗೆ ತಲುಪಿಸಿ ಅಲ್ಲಿ ಶುದ್ಧೀಕರಿಸಿ ವಿವಿಧ ಕಡೆಗಳಿಗೆ ವಿತರಿಸಲಾಗುತ್ತಿದೆ. ಆದರೆ ಹೊಳೆಯಲ್ಲಿ ನೀರಿಲ್ಲದ ಕಾರಣ ವಿತರಣೆಗೆ ಸಮಸ್ಯೆಯಾಗುತ್ತಿದೆ.
ತೀವ್ರ ಮಳೆಗೆ ಅಣೆಕಟ್ಟುಗಳು ಹಾನಿಯಾಗುತ್ತಿರುವುದು ಸಾಮಾನ್ಯವಾ ಗಿತ್ತು. ಆದುದರಿಂದ ಇಲ್ಲಿ ಶಾಶ್ವತವಾಗಿ ನೀರನ್ನು ತಡೆದು ನಿಲ್ಲಿಸಲು ಸಾಧ್ಯವಾಗಿ ರಲಿಲ್ಲ. ಆದರೆ ಈ ಸಮಸ್ಯೆ ಪರಿಹಾರ ಕ್ಕಾಗಿ ಕಳೆದ ವರ್ಷದಲ್ಲಿ ಸ್ಟೀಲ್ ಶಟರ್ ಉಪಯೋಗಿಸಿ ಹೊಸ ಅಣೆಕಟ್ಟು ನಿರ್ಮಿಸಲಾಗಿತ್ತು. ನಾಲ್ಕು ಮೀಟರ್ ಎತ್ತರ, ಮೂರು ಕಿಲೋ ಮೀಟರ್ ನಷ್ಟು ದೂರದಲ್ಲಿ ನೀರನ್ನು ತಡೆದು ನಿಲ್ಲಿಸಿದ್ದರೆ ಬೇಸಿಗೆ ಕಾಲ ಸಹಿತ ನೀರು ವಿತರಿಸಬಹುದೆಂದು ಅಂದಾಜಿಸಲಾ ಗಿತ್ತು. ಆದರೆ ಬೇಸಿಗೆ ತೀವ್ರಗೊಂಡು ಅಣೆಕಟ್ಟಿನ ನೀರು ಭತ್ತಿ ಹೋಯಿತು. ಇದರ ಬಳಿಯಲ್ಲೇ ನಿರ್ಮಿಸಿದ ಜಲ ಸಂಗ್ರಹಗಾರದಲ್ಲೂ ನೀರಿಲ್ಲ. ಇದರಿಂದಾಗಿ ವರ್ಕಾಡಿಯ ವಿವಿಧ ಕಡೆಗಳಲ್ಲಿ ಕುಡಿಯುವ ನೀರು ಕೊರತೆ ತೀವ್ರಗೊಂಡಿತ್ತು. ಜೊತೆಗೆ ಮಂಜೇಶ್ವರ ಪಂಚಾಯತ್‌ನಲ್ಲೂ ಕುಡಿಯುವ ನೀರಿನ ಕ್ಷಾಮ ತಲೆದೋರಿತ್ತು.
ವರ್ಕಾಡಿಯಲ್ಲಿ ಸುಮಾರು ೧೮೦೦ ಕುಟುಂಬಗಳು ಹಾಗೂ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ೧೧೦೦ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದವು. ಮಾರ್ಚ್ ಕೊನೆಗೊಳ್ಳುವುದರ ಮೊದಲೇ ಇಲ್ಲಿ ನೀರಿನ ಕೊರತೆ ಉಂಟಾಗಿದೆ. ಪಂಚಾಯತ್‌ನಿಂದ ಪ್ರತ್ಯೇಕ ಕುಡಿಯುವ ನೀರು ಯೋಜನೆಗಳಿದ್ದರೂ ಅಗತ್ಯಕ್ಕೆ ನೀರು ಲಭಿಸುತ್ತಿಲ್ಲ ಎಂಬ ಆರೋಪವಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸಮಸ್ಯೆ ತಾರಕಕ್ಕೇರುವ ವರ್ಕಾಡಿಯಲ್ಲಿ ಪರಿಹಾರವಾಗಿ ಜಲ್‌ಜೀವನ್ ಮಿಷನ್ ಅಧಿಕಾರಿಗಳು ಜ್ಯಾರಿಗೊಳಿಸಿದ್ದಾರೆ. ಕೆಲವು ಕಡೆಗಳಲ್ಲಿ ಮನೆಗಳಿಗೆ ಪೈಪ್‌ಗಳ ಮೂಲಕ ಕುಡಿಯಲು ನೀರು ತಲುಪಲು ಆರಂಭಿಸಿದರೂ ಇನ್ನೂ ಕೆಲವು ಕಡೆ ಈ ಯೋಜನೆ ನಿರ್ಮಾಣ ಹಾದಿಯಲ್ಲೇ ಇದೆ. ಇದೇ ಆನೆಕಲ್ಲು ಹೊಳೆಯೇ ಜಲ್‌ಜೀವನ್ ಯೋಜನೆಗೂ ಮೂಲ. ಮೂಲದಲ್ಲೇ ನೀರಿಲ್ಲದಾದರೆ ವಿತರಣೆ ನಡೆಯು ವುದಾದರೂ ಹೇಗೆಂದು ಸಂಬಂಧ ಪಟ್ಟವರು ಪ್ರಶ್ನಿಸುತ್ತಿದ್ದಾರೆ. ನೀರು ಲಭ್ಯವಿಲ್ಲದಾದ ಹಿನ್ನೆಲೆಯಲ್ಲಿ ಕೆಲವರು ಹಣ ನೀಡಿ ಸ್ವಂತ ನೆಲೆಯಲ್ಲಿ ನೀರು ಖರೀದಿಸುತ್ತಿದ್ದಾರೆ. ಇದೇ ವೇಳೆ ನೀರು ಲಭಿಸದಿದ್ದರೂ ಆ ಸಮಯದ ದರವನ್ನು ಕೂಡಾ ಪಾವತಿಸಬೇಕಾಗುತ್ತಿದೆ ಎಂದು ಫಲಾನುಭವಿಗಳು ದೂರುತ್ತಾರೆ.