34 ಗ್ರಾಂ ಎಂ.ಡಿ.ಎಂ.ಎ ಸಹಿತ ಓರ್ವ ಸೆರೆ

ಉಪ್ಪಳ: ಮಧ್ಯರಾತ್ರಿ ವೇಳೆ ರಸ್ತೆ ಬಳಿ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ವ್ಯಕ್ತಿಯ ಕೈಯಿಂದ ೩೪ ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿ ಆತನನ್ನು ಬಂಧಿಸಿದ್ದಾರೆ. ಪಳ್ಳಿಕೆರೆ ಬಿಲಾಲ್ ನಗರ ತಾಯಲ್ ಮವ್ವಲ್  ನಿವಾಸಿ ಮೊಹ ಮ್ಮದ್ ಸಹೂದ್ (೨೮) ಎಂಬಾತ ಬಂಧಿತ  ಆರೋಪಿಯಾಗಿದ್ದಾನೆ.

ಮಂಜೇಶ್ವರ ಠಾಣೆವ್ಯಾಪ್ತಿಯಲ್ಲಿ ಮಾದಕವಸ್ತು ಸಾಗಾಟ ನಡೆಯುತ್ತಿ ರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಮೇರೆಗೆ  ಪ್ರತ್ಯೇಕ ಸ್ಕ್ವಾಡ್ ಹಾಗೂ ಮಂಜೇಶ್ವರ ಪೊಲೀಸರು ನಿನ್ನೆ ರಾತ್ರಿ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮೊಹಮ್ಮದ್ ಸಹೂದ್ ಉಪ್ಪಳ ಗೇಟ್ ಬಳಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದಾನೆ. ಆತನನ್ನು ಪೊಲೀಸರು ತಪಾಸಣೆ ನಡೆಸಿದಾಗ ಎಂ.ಡಿ.ಎಂ.ಎ ಪತ್ತೆಯಾಗಿದೆ. ಆರೋಪಿಯನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page