ರಂಜಿತ್ ಶ್ರೀನಿವಾಸನ್ ಕೊಲೆ : ೧೫ ಮಂದಿ ಆರೋಪಿಗಳು ತಪ್ಪಿತಸ್ಥರು
ಮಾವೇಲಿಕ್ಕರ: ೨೦೧೨ ಡಿಸೆಂಬರ್ ೧೯ರಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಕಾರ್ಯದರ್ಶಿಯಾ ಗಿದ್ದ ನ್ಯಾಯವಾದಿ ರಂಜಿತ್ ಶ್ರೀನಿವಾಸನ್ ಅವರ ಮನೆಯೊಳಗೆ ಪತ್ನಿ ಮತ್ತು ಮಕ್ಕಳ ಕಣ್ಮುಂದೆಯೇ ಕಡಿದು ಕೊಲೆಗೈದ ಪ್ರಕರಣದ ಆರೋಪಿಗಳಾಗಿ ೧೫ಮಂದಿ ಪೋಪುಲರ್ ಫ್ರೆಂಟ್ ಕಾರ್ಯಕರ್ತರ ಮೇಲಿನ ಆರೋಪ ಮಾವೇಲಿಕ್ಕರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತುಗೊಂಡಿದೆ. ಈ ೧೫ ಮಂದಿ ಆರೋಪಿಗಳ ಪೈಕಿ ೮ ಮಂದಿ ಮೇಲಿನ ಆರೋಪವೂ ಸಾಬೀತುಗೊಂಡಿದೆ. ಆರೋಪಿಗಳ ಪೈಕಿ ೮ ಮಂದಿ ಕೊಲೆಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವುದಾಗಿಯೂ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಶಿಕ್ಷಾ ಪ್ರಮಾಣ ಘೋಷಣೆಯ ದಿನಾಂಕವನ್ನು ನ್ಯಾಯಾಲಯ ಮುಂದೂಡಿದೆ.