ರಸ್ತೆ ಸ್ವಾಧೀನಪಡಿಸಿದ ಆಡುಗಳು: ಚಾಲಕರಿಗೆ ಭೀತಿ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಹೊಂಡಗಳಿಂದ ಮುಕ್ತಿ ಹೊಂದಲು ಸಣ್ಣ, ದೊಡ್ಡ ವಾಹನ ಚಲಾಯಿಸುವವರು ಆಶ್ರಯಿಸುವ ಬದಿಯಡ್ಕ ಕೆಎಸ್ಟಿಪಿ ರಸ್ತೆಯನ್ನು ಶಾಂತಿಪಳ್ಳದಲ್ಲಿ ಆಡುಗಳು ಸ್ವಾಧೀನಕ್ಕೆ ತೆಗೆದುಕೊಂಡಿವೆ. ಇದರಿಂದ ಈ ದಾರಿಯಾಗಿ ಸಂಚರಿಸುವ ವಾಹನಗಳಿಗೂ ಬೆದರಿಕೆ ಉಂಟಾಗಿದೆ. ಶಾಂತಿಪಳ್ಳಕ್ಕೆ ಹಿಂಡುಗಳಾಗಿ ತಲುಪುವ ಆಡುಗಳು ಮಳೆ ಇಲ್ಲದಿದ್ದರೆ ರಸ್ತೆಯಲ್ಲಿ ವಿಶ್ರಾಂತ ಪಡೆಯುತ್ತವೆ. ಈ ವೇಳೆ ವಾಹನ ರಸ್ತೆಯಲ್ಲಿ ಸಾಗುವಾಗ ಕೆಲವು ಅಡ್ಡಾದಿಡ್ಡಿ ಓಡಾಡುತ್ತವೆ. ಇದರಿಂದ ಆಟೋ ರಿಕ್ಷಾ, ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪುತ್ತಾರೆ. ಇದು ಅಪಘಾತ ಸೃಷ್ಟಿಗೂ ಕಾರಣವಾಗುತ್ತದೆ. ಅಲ್ಲದೆ ಬಸ್ ನಿಲ್ದಾಣ ಪಕ್ಕದಲ್ಲೇ ಆಡುಗಳು ಮಲಗುವ ಕಾರಣ ಬಸ್ಗಳನ್ನು ನಿಲ್ದಾಣದಿಂದ ದೂರದಲ್ಲಿ ನಿಲ್ಲಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಸಮೀಪದಲ್ಲೇ ಇರುವ ಆಡಿನ ಫಾರ್ಮ್ನಿಂದ ಇಲ್ಲಿಗೆ ಆಡು ತಲುಪುತ್ತಿರಬೇಕೆಂದು ಶಂಕಿಸಲಾಗಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.