ರಾಜ್ಯ ಶಾಲಾ ಕಲೋತ್ಸವ: ಚಿನ್ನದ ಕಿರೀಟ ಕಣ್ಣೂರಿಗೆ
ಕೊಲ್ಲಂ: ಕೊಲ್ಲಂನಲ್ಲಿ ನಡೆದ ೬೨ನೇ ರಾಜ್ಯ ಶಾಲಾ ಕಲೋತ್ಸವದಲ್ಲಿ ಕಣ್ಣೂರು ಜಿಲ್ಲೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಕಿರೀಟವನ್ನು ತನ್ನದಾಗಿಸಿಕೊಂಡಿದೆ. ಕಣ್ಣೂರು ಜಿಲ್ಲೆಗೆ ೯೬೨ ಅಂಕಗಳು ಲಭಿಸಿದಾಗ ಕಲ್ಲಿಕೋಟೆ ೯೪೯ ಅಂಕಗಳೊಂದಿಗೆ ದ್ವಿತೀಯ, ಪಾಲ ಕ್ಕಾಡ್ ೯೩೮ ಅಂಕಗಳಿಸಿ ತೃತೀಯ ಸ್ಥಾನ ಗಳಿಸಿದೆ. ಕಾಸರಗೋಡು ಜಿಲ್ಲೆ ೮೪೬ ಅಂಕಗಳೊಂದಿಗೆ ಹತ್ತನೇ ಸ್ಥಾನ ಗಳಿಸಿದೆ. ಆತಿಥೇಯವಾದ ಕೊಲ್ಲಂ ಜಿಲ್ಲೆ ೯೧೨ ಅಂಕಗಳೊಂ ದಿಗೆ ಆರನೇ ಸ್ಥಾನ ಪಡೆದಿದೆ. ವಿಜೇತರಾದ ಕಣ್ಣೂರು ಜಿಲ್ಲಾ ತಂಡಕ್ಕೆ ಚಲನಚಿತ್ರ ನಟ ಮಮ್ಮುಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.