ರೋಯಲ್ ಟ್ರಾವಂಕೂರ್ ಕಂಪೆನಿ ವಿರುದ್ಧ ಬದಿಯಡ್ಕದಲ್ಲಿ ಮತ್ತೆ ಕೇಸು
ಬದಿಯಡ್ಕ: ಹೆಚ್ಚಿನ ಬಡ್ಡಿಯ ಭರವಸೆ ನೀಡಿ ೨.೮೦ ಲಕ್ಷ ರೂಪಾಯಿ ಠೇವಣಿ ಪಡೆದು ವಂಚಿಸಲಾಯಿತೆಂಬ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕೊಲ್ಲಂಗಾನದ ಶ್ರೀಶರಾಜ ಶೆಟ್ಟಿ ನೀಡಿದ ದೂರಿನಂತೆ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಮೆನೇಜಿಂಗ್ ಡೈರೆಕ್ಟರ್ ರಾಹುಲ್, ಡೈರೆಕ್ಟರ್ಗಳಾದ ಅನಿಲ್, ಸಿಂಧು,ಸಂಗೀತ, ಸಿಮಿ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ೨೦೨೩ ಮಾರ್ಚ್ ೧೮ರಂದು ೨.೮೦ ಲಕ್ಷರೂಪಾಯಿ ಕಂಪೆನಿಯಲ್ಲಿ ಠೇವಣಿ ಇರಿಸಿರುವುದಾಗಿ ಶ್ರೀಶರಾಜ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸ ಲಾಗಿದೆ. ಹಣ ಮರಳಿ ನೀಡುವಂತೆ ಕೇಳಿ ಕಂಪೆನಿಯನ್ನು ಸಮೀಪಿಸ ಲಾಯಿತಾದರೂ ಬದಿಯಡ್ಕದ ಲ್ಲಿರುವ ಬ್ರಾಂಚ್ ಕಚೇರಿ ಮುಚ್ಚುಗಡೆಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಇದೇ ಕಂಪೆನಿ ವಿರುದ್ಧ ಬದಿಯಡ್ಕ ಪೊಲೀಸರು ಈ ಹಿಂದೆಯೂ ಕೇಸು ದಾಖಲಿಸಿಕೊಂಡಿದ್ದರು. ಕಂಪೆನಿ ವಿರುದ್ಧ ಕುಂಬಳೆ, ಮಂಜೇಶ್ವರ ಠಾಣೆಗಳಿಗೂ ದೂರುಗಳು ಲಭಿಸಿತ್ತು. ಈಮಧ್ಯೆ ಬದಿಯಡ್ಕ, ಕುಂಬಳೆ, ಉಪ್ಪಳ ಎಂಬಿಡೆಗಳ ಶಾಖೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ.