ವಾರಂಟ್ ಆರೋಪಿಗಳಿಗಾಗಿ ಮುಂದುವರಿದ ಶೋಧ: ಹಲವರ ಬಂಧನ
ಮಂಜೇಶ್ವರ: ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ವಾರಂಟ್ ಆರೋ ಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ವಾರಂಟ್ ಆರೋಪಿಗಳು ಮಂಜೇ ಶ್ವರದಲ್ಲಿ ಸೆರೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ವಾರದಲ್ಲಿ ೪೦ ಮಂದಿ ವಾರಂಟ್ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ನಿನ್ನೆ ಮಾತ್ರ ೧೦ ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಕಳವು, ಹಲ್ಲೆ, ಮಾದಕ ವಸ್ತು ಹಾಗೂ ಪೋಕ್ಸೋ ಪ್ರಕರಣದ ಆರೋಪಿಗಳೂ ಒಳಗೊಡಿದ್ದಾರೆ.
ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಮಂದಿ ವಾರಂಟ್ ಆರೋಪಿಗಳನ್ನು ಬಂಧಿಸ ಲಾಗಿದೆ. ಮೊಗ್ರಾಲ್ ಕೊಪ್ಪಳದ ಅಬ್ದುಲ್ ಸಲಾಂ (೪೦), ಪಚ್ಚಂಬಳದ ಇಬ್ರಾಹಿಂ (೪೫), ಸೂರಂಬೈಲಿನ ಸುಂದರ (೫೫), ಪೆರ್ಣೆಯ ಕಾಶೀನಾಥ್ (೩೫) ಎಂಬಿವರು ಒಳಗೊಂಡಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಹಲವು ಮಂದಿ ವಾರಂಟ್ ಆರೋಪಿಗಳಿದ್ದು ಅವರಿಗಾಗಿ ಶೋಧ ಮುಂದುವರಿಸುತ್ತಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲ್ಲಿ ಹಾಜರುಪಡಿಸಿದ್ದು, ಈ ವೇಳೆ ಕೆಲವು ಆರೋಪಿಗಳಿಗೆ ರಿಮಾಂಡ್ ವಿಧಿಸಲಾಗಿದೆ. ಇನ್ನು ಕೆಲವರಿಗೆ ಜಾಮೀನು ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.