ವಾರಾಹಿ ದೈವಸ್ಥಾನ ಕೂಟೇಲು ನೇಮೋತ್ಸವ 11ರಂದು

ಕೊಡ್ಲಮೊಗರು: ಶ್ರೀ ವಾರಾಹಿ ದೈವಸ್ಥಾನ ಪಿಲಿಕುಂಡ ಕೂಟೇಲು ಇಲ್ಲಿ ಶ್ರೀ ದೈವಗಳ ನೇಮೋತ್ಸವ ಈ ತಿಂಗಳ 11ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರಂಗವಾಗಿ ನಾಳೆ ರಾತ್ರಿ ೮ಕ್ಕೆ ಶ್ರೀ ದೈವಗಳ ಭಂಡಾರ ಏರುವುದು, 11ರಂದು ಬೆಳ್ಗೆಗ ೧೦ಕ್ಕೆ ಶ್ರೀ ಮಲರಾಯ ದೈವದ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ೮ಕ್ಕೆ ಶ್ರೀ ಪಿಲಿಚಾಮುಂಡಿ ದೈವದ ಓಲಸರಿ ಜರಗಲಿದೆ.

೧೪ರಂದು ಸಂಜೆ ೭ಕ್ಕೆ ಸನ್ನಿಧಾನದಲ್ಲಿ ವರ್ಷಾವಧಿ ಶ್ರೀ ಸತ್ಯಗಣಪತಿ ದೇವರ ಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕ್ಷೇತ್ರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page