ವಿದ್ಯಾರ್ಥಿಗಳು ಶಾಲೆಗೆ ಬಾರದಿರುವುದನ್ನು ತಡೆಯಲು ಸಮಗ್ರ ಯೋಜನೆ-ಒ.ಆರ್. ಕೇಳು

ಕಾಸರಗೋಡು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವಿಭಾಗ ವಲಯದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಾರದಿರುವುದನ್ನು   ತಡೆಯುವುದಕ್ಕಾಗಿ ಸಮಗ್ರವಾದ ಯೋಜನೆ ಆವಿಷ್ಕರಿಸುವುದಾಗಿ ಇಲಾಖೆ ಸಚಿವ ಒ.ಆರ್. ಕೇಳು ನುಡಿದರು. ಕಾಸರಗೋಡು ಕಲೆಕ್ಟರೇ ಟ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಅವಲೋಕನ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ವಲಯದ ವಿದ್ಯಾರ್ಥಿಗಳು ಶಾಲೆಗೆ ಬಾರದಿರುವು ದನ್ನು ತಡೆಯುವುದ ಕ್ಕಾಗಿ ಪ್ರತ್ಯೇಕ ಕ್ರಮ ಕೈಗೊಳ್ಳುವುದಾಗಿ ಅವರು ನುಡಿದರು. ಎಸ್‌ಸಿ-ಎಸ್‌ಟಿ ಪ್ರಮೋಟರ್‌ಗಳು ಮನೆಗಳನ್ನು ಸಂದರ್ಶಿಸಿ ಶಾಲೆಗೆ ಬಾರದಿರುವುದರ ಕಾರಣ ಪರಿಶೀಲಿಸಿ ವರದಿ ನೀಡಲು ಸೂಚಿಸಿರುವುದಾಗಿ ಅವರು ನುಡಿದರು.

RELATED NEWS

You cannot copy contents of this page