ವಿದ್ಯಾರ್ಥಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಗುರುತು ಪತ್ತೆ

ಕಾಸರಗೋಡು: ಶಾಲೆಗೆ ಹೋಗುತ್ತಿದ್ದ 14ರ ಹರೆಯದ ವಿದ್ಯಾರ್ಥಿಯನ್ನು ಬೆದರಿಸಿ ಅಪಹರಿ ಸಿಕೊಂಡು ಹೋಗಿ ಲೈಂಗಿಕ ಕಿರು ಕುಳ ನೀಡಿದ ಪ್ರಕರಣದ ಆರೋ ಪಿಯನ್ನು ಗುರುತಿಸುವಲ್ಲಿ ಬೇಕಲ ಪೊಲೀಸರು ಸಫಲರಾಗಿದ್ದಾರೆ.

ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿಯ ಸಹೋದರನ ಸ್ನೇಹಿತನೆಂದು ಹೇಳಲಾಗುತ್ತಿರುವ ೪೦ರ ಹರೆಯದ ಯುವಕ ಈ ದುಷ್ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅದರಂತೆ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಯಲ್ಲಿ ತೊಡಗಿದ್ದಾರೆ.

ಬೇಕಲ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಬೆದರಿಸಿ ಅಪಹರಿಸಿಕೊಂಡು ಅಲ್ಪ ದೂರದ  ಕಟ್ಟಡವೊಂದಕ್ಕೆ ಕೊಂಡೊಯ್ದು ಅಲ್ಲಿ ಆಕೆ ಧರಿಸಿದ್ದ ಶಾಲ್‌ನಿಂದ ಆಕೆಯ ಬಾಯಿ ಬಿಗಿದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. 11 ತಿಂಗಳ ಹಿಂದೆ ಈ ಘಟನೆ ನಡೆದಿದ್ದರೂ, ಆ ಬಗ್ಗೆ ಮೊನ್ನೆಯಷ್ಟೇ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಗುರುತಿಸಿ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page