ವಿವಾಹ ವಿಚ್ಛೇದನ ಲಭಿಸಿದ ಬೆನ್ನಲ್ಲೇ ಯುವತಿ ಪ್ರಿಯತಮನೊಂದಿಗೆ ಪರಾರಿ
ಕುಂಬಳೆ: ವಿವಾಹ ವಿಚ್ಛೇದನ ವನ್ನು ಅಂಗೀಕರಿಸಿ ಕುಟುಂಬ ನ್ಯಾಯಾಲಯದಿಂದ ತೀರ್ಪಿನ ಪ್ರತಿ ಲಭಿಸಿದ ಬೆನ್ನಲ್ಲೇ ಯುವತಿ ಪ್ರಿಯತಮನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಮಂಗಲ್ಪಾಡಿ ಬೇರಿಕೆ ಕಡಪ್ಪುರದ ಫಾತಿಮತ್ ಅಶೂರ (೨೦) ಎಂಬಾಕೆ ಎರ್ನಾಕುಳಂ ಪೆರುಂಬಾ ವೂರು ನಿವಾಸಿಯಾದ ಹನೀಫ್ ರೊಂದಿಗೆ ಪರಾರಿಯಾಗಿ ದ್ದಾಳೆ. ನಿನ್ನೆ ಸಂಜೆ ೫.೩೦ರಿಂದ ರಾತ್ರಿ ೮.೩೦ರ ಮಧ್ಯೆ ಯುವತಿ ಪರಾರಿಯಾಗಿದ್ದಾಳೆಂದು ತಾಯಿ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಫಾತಿಮತ್ ಅಶೂರಳ ಮದುವೆ ಎರಡು ವರ್ಷಗಳ ಹಿಂದೆ ವಡಗರ ನಿವಾಸಿಯೊಂದಿಗೆ ನಡೆದಿತ್ತು. ಆದರೆ ದಾಂಪತ್ಯದಲ್ಲಿ ಸಮಸ್ಯೆಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಒಂದು ವರ್ಷ ಬಳಿಕ ವಿವಾಹ ವಿಚ್ಛೇದನ ಆಗ್ರಹಿಸಿ ಫಾತಿಮತ್ ಅಶೂರ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿದ ತೀರ್ಪಿನ ಪ್ರತಿ ನಿನ್ನೆ ಲಭಿಸಿದೆಯೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ವಿವಾಹವಿಚ್ಛೇದನ ಪ್ರಕರಣ ನ್ಯಾಯಾಲಯದ ಪರಿಗಣನೆಯಲ್ಲಿರು ವಂತೆಯೇ ಓರ್ವ ಬ್ರೋಕರ್ ಮೂಲಕ ಎರ್ನಾಕುಳಂ ನಿವಾಸಿಯಾದ ಹನೀಫ್ ಬೇರಿಕೆಗೆ ತಲುಪಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾನೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಪರಿಗಣಿಸುವು ದಾಗಿ ಮನೆಯವರು ತಿಳಿಸಿದ್ದರು. ಬ್ರೋಕರ್‌ನೊಂದಿಗೆ ತಲುಪಿದ ಹನೀಫ್ ಮೊಬೈಲ್ ಫೋನ್‌ನ್ನು ಫಾತಿಮತ್ ಅಶೂರಳಿಗೆ ನೀಡಿ ಹೋಗಿದ್ದನೆಂದು ತಾಯಿ ತಿಳಿಸಿದ್ದಾರೆ.
ಅನಂತರ ಆ ಇಬ್ಬರ ಮಧ್ಯೆ ನಿರಂತರ ಸಂಪರ್ಕ ದಲ್ಲಿದ್ದರೆಂದೂ ತಿಳಿಸಲಾಗಿದೆ. ಏಳು ಪವನ್ ಚಿನ್ನ ಹಾಗೂ ೨೨೦೦೦ ರೂಪಾಯಿಗಳನ್ನು ಮಗಳು ಪರಾರಿ ವೇಳೆ ಕೊಂಡೊಯ್ದಿರುವುದಾಗಿಯೂ ತಾಯಿ ಹೇಳಿದ್ದಾರೆ.
ಪೊಲೀಸರು ಕೇಸು ದಾಖಲಿಸಿ ಯುವತಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಫಾತಿಮತ್ ಅಶೂರ ಹಾಗೂ ಪ್ರಿಯತಮ ಹನೀಫ ಇಂದು ಕೋದಮಂಗಲ ಪೊಲೀಸ್ ಠಾಣೆಯಲ್ಲಿ ಶರಣಾಗಲಿದ್ದಾರೆಂಬ ಬಗ್ಗೆ ಪೊಲೀಸರಿಗೆ ಸೂಚನೆ ಲಭಿಸಿದೆ.