ವಿವಿಧ ಕಡೆಗಳಲ್ಲಿ ತ್ಯಾಜ್ಯ: ಎನ್‌ಫೋರ್ಸ್‌ಮೆಂಟ್ ತಂಡದಿಂದ ದಂಡ ವಸೂಲಿ
ಬೋವಿಕ್ಕಾನ: ಪೊವ್ವಲ್‌ನಲ್ಲಿ ಪೆಟ್ರೋಲ್ ಬಂಕ್‌ನ ಸಮೀಪ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ರಾಶಿ ಹಾಕಿರುವ ಘಟನೆಯಲ್ಲಿ ಬಂಕ್ ಮಾಲಕನಿಂದ ಐದು ಸಾವಿರ ರೂ.ವನ್ನು ದಂಡವಾಗಿ ಪಡೆದುಕೊಂಡು ತ್ಯಾಜ್ಯವನ್ನು ಹಸಿರು ಕ್ರಿಯಾಸೇನೆಗೆ ನೀಡಿ ಪರಿಸರವನ್ನು ಶುಚೀಗೊಳಿಸುವುದಕ್ಕೆ ನಿರ್ದೇಶಿಸಲಾಯಿತು. ತ್ಯಾಜ್ಯವನ್ನು ಸಂಸ್ಕರಿಸದೆ ನಿರ್ಲಕ್ಷ್ಯವಾಗಿ ಎಸೆದಿರುವುದಕ್ಕೆ ಮುಳಿಯಾರಿನ ಕ್ವಾರ್ಟರ್ಸ್‌ಗಳು, ಅಪಾರ್ಟ್ ಮೆಂಟ್, ಗ್ರೋಸರಿ ಎಂಬೀ ಸಂಸ್ಥೆಗಳಿಗೆ ದಂಡ ಹೇರಲಾಗಿದೆ. ಬದಿಯಡ್ಕ ಪಂ.ನ ವಿವಿಧ ಸ್ಥಳಗಳಲ್ಲಿ ನಡೆಸಿದ ತಪಾಸಣೆಯಲ್ಲಿ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಉಪೇಕ್ಷಿಸಿರುವುದಕ್ಕೆ ಹೋಟೆಲ್ ಮಾಲಕನಿಂದ 3500 ರೂ. ದಂಡ ವಸೂಲು ಮಾಡಲಾಗಿದೆ. ಮಲಿನ ಜಲವನ್ನು ತೆರೆದ ಸ್ಥಳಕ್ಕೆ ಹರಿಯ ಬಿಟ್ಟಿರುವುದಕ್ಕೂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಾಶಿ ಹಾಕಿರುವುದಕ್ಕೂ ಅಪಾರ್ಟ್‌ಮೆಂಟ್‌ಗೆ ೧೦೦೦೦ ರೂ. ದಂಡ ಹೇರಲಾಗಿದೆ. ಬೀರಿನ ಮೂಲದಲ್ಲಿ ತ್ಯಾಜ್ಯ ಹಾಕಿರುವುದಕ್ಕೆ ಅಪಾರ್ಟ್‌ಮೆಂಟ್ ಮಾಲಕನಿಗೆ 5000 ರೂ. ದಂಡ ಹೇರಲಾಗಿದೆ.
ತಪಾಸಣೆ ತಂಡದಲ್ಲಿ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಹೆಲ್ತ್ ಇನ್ಸ್‌ಪೆಕ್ಟರ್ ಸುಜಿತ, ವಿ.ಇ.ಒ. ಮಹೇಶ್ ಕುಮಾರ್, ಪಿರಿಯಾಂಕ, ಇ.ಕೆ. ಫಾಸಿಲ್ ಭಾಗವಹಿಸಿದರು.