ವೆಂಕಟ್ರಮಣ ಹೊಳ್ಳರಿಗೆ ವಿಶ್ವಕರ್ಮ ಭಜನಾ ಸಂಘದಿಂದ ಗೌರವಾರ್ಪಣೆ
ಕಾಸರಗೋಡು: ಚೆನ್ನೈಯಲ್ಲಿ ಡಾಕ್ಟರೇಟ್ ಪ್ರಶಸ್ತಿ ಪಡೆದ ಕೆ.ಎನ್. ವೆಂಕಟ್ರಮಣ ಹೊಳ್ಳರನ್ನು ವಿಶ್ವಕರ್ಮ ಭಜನಾಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಭುವನೇಶ್ ಆಚಾರ್ಯ ತಾಳಿಪಡ್ಪು, ಹಿರಿಯ ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ, ಕಾರ್ಯದರ್ಶಿ ಗಣೇಶ್ ಆಚಾರ್ಯ ಕೊರಕ್ಕೋಡು, ಕೋಶಾಧಿಕಾರಿ ಪ್ರವೀಣ್ ಕುಮಾರ್ ನಲ್ಕ, ಜತೆ ಕಾರ್ಯದರ್ಶಿ ತುಕಾರಾಮ ಆಚಾರ್ಯ ಕೆರೆಮನೆ, ಯುವಕ ಸಂಘದ ಅಧ್ಯಕ್ಷ ಶೀತಲ್ ಕುಮಾರ್, ಸದಸ್ಯ ಕೇತನ್ ಕೆರೆಮನೆ, ಡಾ| ಜನಾರ್ದನ್ ನಾಯ್ಕ್, ಲವ ಮೀಪುಗುರಿ ಉಪಸ್ಥಿತರಿದ್ದರು.