ಉಪ್ಪಳ: ಯಾವುದೇ ದಾಖಲೆ ಪತ್ರಗಳಿಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ ೧,೫೩,೦೦೦ ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ನಿನ್ನೆ ಸಂಜೆ ತಲಪಾಡಿಯಲ್ಲಿ ವಾಹನ ತಪಾಸಣೆ ವೇಳೆ ಆಗಮಿಸಿದ ವ್ಯಾನ್ವೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಹಣ ಪತ್ತೆಯಾಗಿದೆ. ಅದನ್ನು ಚುನಾವಣಾ ಸಂಬಂಧ ನೇಮಿಸಿದ ಪ್ರತ್ಯೇಕ ಸ್ಕ್ವಾಡ್ಗೆ ಹಸ್ತಾಂತರಿಸಲಾಗಿದೆ.