ಶಾಪಿಂಗ್ ಕಾಂಪ್ಲೆಕ್ಸ್ನಿಂದ ತ್ಯಾಜ್ಯ ನೀರು ತೆರೆದ ಸ್ಥಳಕ್ಕೆ: ಬಿಜೆಪಿ ಕೌನ್ಸಿಲರ್ಗಳಿಂದ ಪ್ರತಿಭಟನೆ
ಕಾಸರಗೋಡು: ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣದ ನಗರಸಭಾ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಹೋಟೆಲ್ ಗಳಿಂದ ತ್ಯಾಜ್ಯ ನೀರನ್ನು ಹೊರಗೆ ಹರಿದು ಬಿಡುವುದನ್ನು ಪ್ರತಿಭಟಿಸಿ ಬಿಜೆಪಿ ಕೌನ್ಸಿಲರ್ಗಳು ಚಳವಳಿ ನಡೆಸಿದರು. ನಗರದ ಹೊಸ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್ ಪರಿಸರದ ಆಟೋ ರಿಕ್ಷಾ-ಟ್ಯಾಕ್ಸಿ ಸ್ಟ್ಯಾಂಡ್ ಪರಿಸರದಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ಆ ನೀರನ್ನು ನೂರಾರು ಮಂದಿ ಮೆಟ್ಟಿಕೊಂಡೇ ನಡೆದು ಹೋಗಬೇಕಾಗುತ್ತಿದೆ. ತ್ಯಾಜ್ಯ ನೀರು ಪರಿಸರದ ಪ್ರದೇಶದಲ್ಲಿ ದುರ್ನಾತ ಬೀರತೊಡಗಿದೆ. ಇದನ್ನು ಪ್ರತಿಭಟಿಸಿ ನಗರಸಭೆಯ ಬಿಜೆಪಿ ಕೌನ್ಸಿಲರ್ಗಳು ಪ್ರತಿಭಟನೆ ನಡೆಸಿದರು. ತ್ಯಾಜ್ಯ ನೀರು ತೆರೆದ ಸ್ಥಳಕ್ಕೆ ಹರಿದು ಬಿಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾ ಯಿತು. ಹೊಸ ಬಸ್ ನಿಲ್ದಾಣದ ನಗರ ಸಭಾ ಶಾಂಪಿಂಗ್ ಕಾಂಪ್ಲೆಕ್ಸ್ ಸಮೀಪ ನಡೆದ ಚಳವಳಿಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ, ನಗರಸಭಾ ವಿಪಕ್ಷ ನೇತಾರನಾದ ಪಿ. ರಮೇಶ್ ಉದ್ಘಾಟಿಸಿ ದರು. ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಪವಿತ್ರ, ವೀಣಾ ಅರುಣ್, ಹೇಮಲತಾ, ರಜನಿ ಮಾತನಾಡಿದರು. ವಿನು ಕಡಪ್ಪರ ಸ್ವಾಗತಿಸಿ, ವರಪ್ರಸಾದ್ ಕೋಟೆಕಣಿ ವಂದಿಸಿದರು.