ಶಾಲಾ ವಿದ್ಯಾರ್ಥಿನಿಗೆ ಇರಿತ
ಬದಿಯಡ್ಕ: ಶಾಲೆ ಬಿಟ್ಟು ಮನೆಗೆ ನಡೆದುಹೋಗುತ್ತಿದ್ದ ಒಂಭತ್ತನೇ ತರಗತಿ ವಿದ್ಯಾರ್ಥಿನಿಗೆ ವಿದ್ಯಾರ್ಥಿ ಯೋರ್ವ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.
ಪೆರಡಾಲ ನವಜೀವನ ಶಾಲೆಯ ವಿದ್ಯಾರ್ಥಿನಿಗೆ ಇರಿದು ಗಾಯಗೊಳಿ ಸಲಾಗಿದೆ. ಮೊನ್ನೆ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ನಡೆದುಹೋಗುತ್ತಿ ದ್ದಂತೆ ಆಕೆಯನ್ನು ಹಿಂಬಾಲಿಸಿ ಬಂದ ಬದಿಯಡ್ಕ ಸರಕಾರಿ ಹೈಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿಯಾದ ೧೫ರ ಹರೆಯದ ಬಾಲಕ ಇರಿದು ಗಾಯಗೊಳಿಸಿರು ವುದಾಗಿ ದೂರಲಾಗಿದೆ. ವಿಕಲ ಚೇತನನಾದ ವಿದ್ಯಾರ್ಥಿ ಈ ಕೃತ್ಯ ನಡೆಸಿದ್ದಾನೆ. ಇರಿತದಿಂದ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಳು.