ಶಿವಳ್ಳಿ ಬ್ರಾಹ್ಮಣ ಜಿಲ್ಲಾ ಸಾಂಸ್ಕೃತಿಕೋತ್ಸವ ಆರಂಭ
ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಾಂಸ್ಕೃತಿಕೋತ್ಸವ ಇಂದು ಬೆಳಿಗ್ಗೆ ಮುಳ್ಳೇರಿಯದ ಗಣೇಶ ಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಆರಂಭವಾಯಿತು. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ. ಡಾ. ರವಿಪ್ರಸಾದ್ ಧ್ವಜಾರೋಹಣ ನಡೆಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಟಿ ಕೆ ಮಂಜುನಾಥ, ಜಿಲ್ಲಾ ಕಾರ್ಯದರ್ಶಿ ಡಾ. ಬಿ. ಸೀತಾರಾಮ ಕಡಮಣ್ಣಾಯ, ಮುಳ್ಳೇರಿಯ ವಲಯ ಕಾರ್ಯದರ್ಶಿ ರಾಘವೇಂದ್ರ ರಾವ್, ವಿಜಯರಾಜ ಪುಣಿಂಚಿತ್ತಾಯ, ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಅಡೂರು ಪ್ರಕಾಶ್ ಪಾಂಙಣ್ಣಾಯ ಸಹಿತ ಜಿಲ್ಲಾ ಸಮಿತಿ ಹಾಗೂ ವಿವಿಧ ವಲಯ ಸಮಿತಿಯ ಸದಸ್ಯರು ಭಾಗವಹಿಸಿದ್ದರು.