ಸಂಚರಿಸುತ್ತಿದ್ದ ವೇಳೆ ಬೈಕ್ ಬೆಂಕಿಗಾಹುತಿ
ಕುಂಬಳೆ: ಸಂಚರಿಸುತ್ತಿದ್ದ ವೇಳೆ ಬೈಕ್ ಬೆಂಕಿಗಾ ಹುತಿಯಾದ ಘಟನೆ ನಡೆದಿದೆ. ನಾಯ್ಕಾಪುವಿನ ರವಿ ಎಂಬವರ ಬೈಕ್ ಬೆಂಕಿಗಾಹುತಿಯಾಗಿದೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ರವಿ ಹಾಗೂ ಪುತ್ರ ಕುಂಬಳೆಯಿಂದ ಮನೆಗೆ ಮರಳುತ್ತಿದ್ದಾಗ ಭಾಸ್ಕರನಗರಕ್ಕೆ ತಲುಪಿದಾಗ ಸ್ಟಾರ್ಟ್ ಆಫ್ ಆಗಿದೆ. ಇದರಿಂದ ಮತ್ತೆ ಸ್ಟಾರ್ಟ್ ಮಾಡಲೆತ್ನಿಸಿದಾಗ ದಿಢೀರನೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ರವಿ ಹಾಗೂ ಪುತ್ರ ಬೈಕ್‌ನಿಂದ ಇಳಿದುದರಿಂದ ಭಾರೀ ಅಪಾಯ ತಪ್ಪಿದೆ.