ಸಿಪಿಎಂ ತೊರೆದು ಕಾಂಗ್ರೆಸ್ ಸೇರಿದ ಶಿಯಾಬುದ್ದೀನ್ ಕುಬಣೂರುರಿಗೆ ಸ್ವಾಗತ
ಕುಂಬಳೆ: ಸಿಪಿಎಂ ಉಪ್ಪಳ ಏರಿಯಾ ಸಮಿತಿ ಸದಸ್ಯ, ಡಿಫಿ ಮಾಜಿ ಮುಖಂಡ ಎ.ಕೆ. ಶಿಯಾಬುದ್ದೀನ್ ಕುಬಣೂರು ಮಾತೃಪಕ್ಷವಾದ ಕಾಂಗ್ರೆಸ್‌ಗೆ ಮರಳಿದರು. ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ.ಕೆ. ಅಬ್ದುಲ್ಲರ ಪುತ್ರನಾಗಿರುವ ಶಿಯಾಬುದ್ದೀನ್ ಕುಬಣೂರು 2006ರಲ್ಲಿ ಸಿಪಿಎಂಗೆ ಸೇರಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ದುರಾಡಳಿತ, ಸಿಪಿಎಂನ ಸಂಘ ಪರಿವಾರ ಅನುಕೂಲ ನೀತಿ, ಉಪ್ಪಳ ಲೋಕಲ್ ಸಮಿತಿ ಸದಸ್ಯರ ಅಸಡ್ಡೆ ಹಿನ್ನೆಲೆಯಲ್ಲಿ ಮನ ನೊಂದು ಕಾಂಗ್ರೆಸ್‌ಗೆ ಮರಳುತ್ತಿರುವುದಾಗಿ ಅವರು ತಿಳಿಸಿದ್ದು, ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಅವರನ್ನು ಮಾತೃಪಕ್ಷಕ್ಕೆ ಸ್ವಾಗತಿಸಿದರು. ಇದೇ ವೇಳೆ ಸಿಪಿಎಂನ ಕಾರ್ಯ ಕರ್ತ ಇಬ್ರಾಹಿಂ ಟಿ.ಎಂ. ಕೂಡಾ ಕಾಂಗ್ರೆಸ್‌ಗೆ ಸೇರಿದ್ದು, ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಮಂಡಲ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಡಿಎಂಕೆ ಮೊಹಮ್ಮದ್, ಮೊಹಮ್ಮದ್ ಸೀಗಂದಡಿ, ಹನೀಫ್ ಮೈರ್ಕಳ, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಮೊಹಮ್ಮದ್ ಶುಭ ಹಾರೈಸಿದರು. ಹಲವರು ಉಪಸ್ಥಿತರಿದ್ದರು.