ಸುದೆಂಬಳ ಸಂಕ ಶೋಚನೀಯಾವಸ್ಥೆಯಲ್ಲಿ ವಾಹನ ಸಂಚಾರಕ್ಕೆ ಭೀತಿ
ಪೈವಳಿಕೆ: ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಸುದೆಂಬಳದಲ್ಲಿ ಸಂಕವೊಂದು ಶೋಚನೀಯಾವ್ಥೆಯ ಲ್ಲಿದ್ದು, ವಾಹನ ಸಂಚಾರ್ಕಕೆ ಭೀತಿ ಸೃಷ್ಟಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಕನಿಯಾ-ಬಳ್ಳೂರು ರಸ್ತೆಯ ಸುದೆಂಬಳದಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಸಂಕ ಶೋಚನೀಯಾವಸ್ಥೆಯಲ್ಲಿದೆ. ಸಂಕದ ಅಡಿ ಭಾಗದ ಕಾಂಕ್ರೀಟ್ ಬಿದ್ದು ಹೋಗಿ ಕಬ್ಬಿಣದ ಸಲಾಕೆ ಗೋಚರಿ ಸುತ್ತಿದೆ. ಅಗಲ ಕಿರಿದಾದ ಸಂಕದಲ್ಲಿ ಆಗಾಗ ಅಪಘಾತವೂ ಸಂಭವಿಸು ತ್ತಿದೆ. ಮಾತ್ರವಲ್ಲ ಸಂಕದ ಒಂದು ಬದಿಗೆ ನಿರ್ಮಿಸಲಾದ ಕಬ್ಬಿಣದ ಬೇಲಿ ವಾಹನ ಢಿಕ್ಕಿಯಾಗಿ ಹಾನಿಗೊಂಡಿದೆ. ಈ ರಸ್ತೆಯಿಂದ ದಿನನಿತ್ಯ ಬಸ್ ಸಹಿತ ನೂರಾರು ವಾಹನ ಸಂಚಾರ ನಡೆಸುತ್ತಿದೆ. ಶೋಚನೀಯ ಹಾಗೂ ಇಕ್ಕಟ್ಟಾದ ಈ ಸಂಕವನ್ನು ಕೆಡವಿ ಹೊಸ ಸಂಕ ನಿರ್ಮಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.