ಸೊಸೈಟಿಯಲ್ಲಿ ಆರ್ಥಿಕ ವಂಚನೆ: ಆರೋಪಿಯನ್ನು ಸಿಪಿಎಂ ಸಂರಕ್ಷಿಸುತ್ತಿದೆ-ಐಕ್ಯರಂಗ ಆರೋಪ
ಕಾಸರಗೋಡು: ಸಿಪಿಎಂ ನಿಯಂತ್ರಣದಲ್ಲಿರುವ ಮುಳ್ಳೇರಿಯದ ಕಾರಡ್ಕ ಅಗ್ರಿಕಲ್ಟರಿಸ್ಟ್ ಸೊಸೈಟಿಯಲ್ಲಿ ಕೋಟ್ಯಂತರ ರೂ. ವಂಚಿಸಿದ ಘಟನೆಯಲ್ಲಿ ಕಾರ್ಯದರ್ಶಿ ರತೀಶ್‌ನನ್ನು ಮಾತ್ರವೇ ಆರೋಪಿಯನ್ನಾಗಿ ಮಾಡಿ ಇತರ ಆರೋಪಿಗಳನ್ನು ಸಂರಕ್ಷಿಸಲು ಸಿಪಿಎಂ ಯತ್ನಿಸುತ್ತಿದೆಯೆಂದು ಐಕ್ಯರಂಗ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಪ್ರಧಾನ ಕಾರ್ಯದರ್ಶಿ ಎ. ಗೋವಿಂ ದನ್ ನಾಯರ್ ಅಭಿಪ್ರಾಯ ಪಟ್ಟಿದ್ದಾರೆ. ಕೋಟ್ಯಂತರ ರೂ. ವಂಚನೆ ನಡೆಸಿಯೂ ಆಡಳಿತ ಸಮಿತಿ ತಿಳಿದಿಲ್ಲವೆಂದು ನುಡಿಯುತ್ತಿರುವುದು ಅಸತ್ಯವಾಗಿದೆ. ರತೀಶ್‌ನನ್ನು ಪಕ್ಷದಿಂ ದ ಹೊರದೂಡಿ ಬಚಾವಾಗಲು ಸಿಪಿಎಂ ಯತ್ನಿಸುತ್ತಿದೆ. ಹಣ ಹಗೂ ಚಿನ್ನವನ್ನು ಸಾಗಿಸುತ್ತಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. 2019ರಲ್ಲಿ ಕಾರ್ಯದರ್ಶಿ ವಿರುದ್ಧ ವಂಚನೆ ಆರೋಪ ವಿತ್ತೆಂದೂ ಈ ಸಮಸ್ಯೆಯನ್ನು ಸಿಪಿಎಂ ಮಾತುಕತೆ ಮೂಲಕ ಪರಿಹರಿಸಿದೆ ಎಂದೂ, ಆ ಬಳಿಕ ಪಕ್ಷದ ಹೊಣೆಯಿಂದ ರತೀಶ್‌ನನ್ನು ತೆರವುಗೊಳಿಸಲಾ ಗಿತ್ತೆಂದೂ ಐಕ್ಯರಂಗ ದೂರಿದೆ. ಈ ರೀತಿಯಲ್ಲಿ ಓರ್ವನನ್ನು ಸಿಪಿಎಂ ಸಂರಕ್ಷಿ ಸುತ್ತಿರುವುದರಿಂದ ಇದೆಲ್ಲಾ ಪಕ್ಷಕ್ಕೆ ತಿಳಿದೇ ನಡೆಯುತ್ತಿರುವ ವಂಚನೆ ಎಂದು ಶಂಕೆ ಉಂಟುಮಾಡುತ್ತಿದೆಯೆಂದು ಐಕ್ಯರಂಗ ಮುಖಂಡರು ತಿಳಿಸಿದ್ದಾರೆ.