ಸ್ಕೂಟರ್ಗೆ ಕಾರು ಢಿಕ್ಕಿ: ದಂಪತಿಗೆ ಗಾಯ
ಸೀತಾಂಗೋಳಿ: ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆದು ದಂಪತಿ ಗಾಯಗೊಂಡ ಘಟನೆ ಸೀತಾಂ ಗೋಳಿಯಲ್ಲಿ ಸಂಭವಿಸಿದೆ.
ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಕುಂಬ್ಡಾಜೆ ಪಾವೂರು ನಿವಾಸಿಗಳಾದ ಜೆನಿಸೀಸ್ ಮೊಂತೇರೊ (48), ಪತ್ನಿ ವಯಲೆಟ್ ವರೆಡ (45) ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೀತಾಂಗೋಳಿ ಪೇಟೆಯ ಸರ್ಕಲ್ ಸಮೀಪ ನಿನ್ನೆ ಸಂಜೆ ಈ ಅಪಘಾತವುಂಟಾಗಿದೆ.