ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಮಹಿಳೆ ಒಳಗೊಂಡ ತಂಡ ಪರಾರಿ
ಕಾಸರಗೋಡು: ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಯುವತಿಯ ಕುvತ್ತಿಗೆಯಿಂದ ಸ್ಕೂಟಿಯಲ್ಲಿ ಬಂದ ಇಬ್ಬರು ಮೂರೂವರೆ ಪವನ್ನ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ನಡೆದದೆ.
ಮಾಯಿಪ್ಪಾಡಿ ನಿವಾಸಿ ಪದ್ಮನಾಭ ಎಂಬವರ ಪತ್ನಿ, ಕಾಸರಗೋಡು ನಗರದ ಜವುಳಿ ಅಂಗಡಿಯೊಂದರ ಸಿಬ್ಬಂದಿ ದೀಪ್ತಿ (೩೬) ಎಂಬವರು ಕೆಲಸ ಮುಗಿಸಿ ಸ್ಕೂಟರ್ನಲ್ಲಿ ನಿನ್ನೆ ರಾತ್ರಿ ಸುಮಾರು ೭.೧೫ರ ವೇಳೆ ಉಳಿಯತ್ತಡ್ಕ ಐಎಡಿ ಜಂಕ್ಷನ್ ಬಳಿ ತಲುಪಿದಾಗ ಸ್ಕೂಟಿಯಲ್ಲಿ ಅಲ್ಲಿಗೆ ಬಂದ ಯುವಕ ಮತ್ತು ಯುವತಿಯೋರ್ವೆ ಮಧೂರು ದಾರಿ ಎಲ್ಲಿ ಎಂದು ದೀಪ್ತಿಯವರಲ್ಲಿ ಕೇಳಿದ್ದು ತಕ್ಷಣ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾದರೆಂದು ಪೊಲೀ ಸರು ತಿಳಿಸಿದ್ದಾರೆ. ಸರ ಎಗರಿಸಿದ ಇಬ್ಬರಲ್ಲಿ ಓರ್ವೆ ಮಹಿಳೆಯಾಗಿರು ವುದಾಗಿ ಹೇಳಲಾಗುತ್ತಿದ್ದರೂ, ಅದು ಹೆಣ್ಣಿನ ವೇಷ ಧರಿಸಿ ಬಂದ ಗಂಡಸು ಆಗಿರಬಹುದೆಂಬ ಶಂಕೆಯೂ ಪೊಲೀಸರಲ್ಲಿ ಉಂಟಾಗಿದೆ.
ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆ ಪರಿಸರದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಿದ್ಯಾನಗರ, ಬೇಡಗ, ಬೇಕಲ, ಮೇಲ್ಪರಂಬ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲೂ ಇತ್ತೀಚೆಗೆ ಇದೇ ರೀತಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ಹಲವು ಘಟನೆಗಳೂ ಈ ಹಿಂದೆ ನಡೆದಿವೆ.