ಹುಟ್ಟುಹಬ್ಬದಂದೇ ತಲೆಕೂದಲು ದಾನ ಮಾಡಿ ಮಾದರಿಯಾದ ನಾಲ್ಕನೇ ತರಗತಿ ವಿದ್ಯಾರ್ಥಿನಿ

ಕುಂಬಳೆ: ಕೀಮೋ ಚಿಕಿತ್ಸೆ ನಡೆಸಿದ ಪರಿಣಾಮ ತಲೆ ಕೂದಲು ನಷ್ಟಗೊಂಡ ಕ್ಯಾನ್ಸರ್ ರೋಗಿಗಳಿಗೆ ವಿಗ್ ನಿರ್ಮಿಸಿ ನೀಡಲು ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೋರ್ವೆ ತನ್ನ ತಲೆ ಕೂದಲನ್ನು ದಾನ ಮಾಡಿ ಮಾದರಿಯಾಗಿದ್ದಾಳೆ.

ಕುಂಬಳೆ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೋಕುಲ ಎಸ್-ಅಶ್ವಿನಿ ದಂಪತಿಯ ಪುತ್ರಿಯೂ ಬೇಳ ಸೈಂಟ್ ಮೇರೀಸ್ ಚರ್ಚ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾದ ಶ್ರೀಯ ಗೋಕುಲ್ ತನ್ನ ಕೂದಲು ದಾನ ಮಾಡಿದ್ದಾಳೆ. ತೃಶೂರು ಅಮಲ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಹೇರ್ ಬ್ಯಾಂಕ್‌ಗೆ ತನ್ನ ಜನ್ಮದಿನದಂದೇ ತನ್ನ ಸೌಂದರ್ಯದ ಭಾಗವಾಗಿ ಬೆಳೆಸಿದ ೧೨ ಇಂಚು ಉದ್ದದ ಕೂದಲನ್ನು ದಾನ ಮಾಡಿದ್ದಾಳೆ. ಹೇರ್ ಬ್ಯಾಂಕ್ ಪರವಾಗಿ ಕ್ಷೇಮ ಚಟುವಟಿಕೆಯಲ್ಲಿ ನಿರತರಾದ ಸಜಿನಿ ಕೂದಲು ಪಡೆದುಕೊಂಡರು.

RELATED NEWS

You cannot copy contents of this page