ಹೈಯರ್ ಸೆಕೆಂಡರಿ ಶಾಲೆಗಳಿಗೆ ಅಗತ್ಯದ ಪೀಠೋಪಕರಣಗಳನ್ನು ನೀಡಲು ಜಿ.ಪಂ. ಆಡಳಿತ ಸಮಿತಿ ತೀರ್ಮಾನ

ಕಾಸರಗೋಡು: ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲೆಗಳಿಗೆ ಅಗತ್ಯವಾದ ಪೀಠೋಪಕರಣಗಳನ್ನು ನೀಡಲು ಜಿಲ್ಲಾ ಪಂಚಾಯತ್ ಆಡಳಿತ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜೂನ್ ೭ರಿಂದ ೯ರವರೆಗೆ ಪಿಲಿಕ್ಕೋಡ್‌ನಲ್ಲಿ ನಡೆದ ಕುಟುಂಬಶ್ರೀ ರಾಜ್ಯ ಮಟ್ಟದ ಕಲೋತ್ಸವಕ್ಕೆ ೨ ಲಕ್ಷ ರೂ. ನೀಡಲು ತೀರ್ಮಾನಿಸಲಾಯಿತು. ಜಿಲ್ಲಾ ಆಸ್ಪತ್ರೆಗೆ ಉಪಕರಣ ಖರೀದಿಸಲು ಆಡಳಿತ ಸಮಿತಿ ಸಭೆ ತೀರ್ಮಾನಿಸಿದೆ. ಪಂಚಾಯತ್ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಉಪಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಶಕುಂತಳಾ, ಎಂ. ಮನು, ಸದಸ್ಯರು ಸಹಿತ ಹಲವರು ಭಾಗವಹಿಸಿದರು.

You cannot copy contents of this page