ಹೊಸಂಗಡಿ ರೈಲ್ವೇ ಗೇಟ್ ರಸ್ತೆಯಲ್ಲಿ ಇಂಟರ್‌ಲಾಕ್ ಅಳವಡಿಸಲು ಸಿದ್ಧತೆ

ಮಂಜೇಶ್ವರ: ವಿವಿಧ ರೈಲು ನಿಲ್ದಾಣ, ರೈಲ್ವೇ ಗೇಟ್ ಅಭಿವೃದ್ದಿ ನಡೆಸಲಾಗುತ್ತಿದ್ದು ಇದರಂತೆ ಹೊಸಂ ಗಡಿ ರೈಲ್ವೇ ಗೇಟ್ ಹಳಿ ರಸ್ತೆಯನ್ನು ಕೂಡಾ ಅಭಿವೃದ್ದಿಗೊಳಿಸಲು ಸಿದ್ದತೆ ನಡೆಸುತ್ತಿದ್ದಾರೆ. ಈಗಾಗಲೇ ಮಂಜೇಶ್ವರ ರೈಲ್ವೇ ನಿಲ್ದಾಣ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಉಪ್ಪಳ ರೈಲ್ವೇಗೇಟ್‌ನಲ್ಲಿ ರಸ್ತೆಗೆ ಇಂಟರ್ ಲಾಕ್ ಅಳವಡಿಸಲಾಗಿದೆ. ಈಗ ಬಂಗ್ರಮAಜೇಶ್ವರ ರಸ್ತೆ ಪ್ರವೇಶಿಸುವ ಹೊಸಂಗಡಿ ರೈಲ್ವೇ ಗೇಟ್‌ನಲ್ಲಿ ರಸ್ತೆಗೆ ಇಂಟರ್‌ಲಾಕ್ ಅಳವಡಿಸಲು ರೈಲ್ವೇ ಇಲಾಖೆ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಸಾಮಾಗ್ರಿಗಳ ನ್ನು ತಂದು ಹಾಕಲಾಗಿದೆ. ಸಾಮಾಗ್ರಿಗಳು ತಲುಪಿದ ಬಳಿಕ ಕಾಮಗಾರಿ ಆರಂಭಿಸಲಾ ಗುವುದೆಂದು ಅದಿsಕಾರಿಗಳು ತಿಳಿಸಿ ದ್ದಾರೆ. ಕಾಮಗಾರಿ ಪೂರ್ತಿಗೊಂಡರೆ ಸಂಚಾರ ಸುಗಮಗೊಳ್ಳಲಿದೆ. ಕಾಮಗಾರಿ ವೇಳೆ ಇಲ್ಲಿನ ರೈಲ್ವೇ ಗೇಟ್ ಮುಚ್ಚುವ ಸಾಧ್ಯತೆ ಇದ್ದು, ಇದರಿಂದ ಬಂಗ್ರಮAಜೇಶ್ವರ ಸಹಿತ ವಿವಿಧ ಪ್ರದೇಶಕ್ಕೆ ಸಂಚಾರ ಮೊಟಕುಗೊಳ್ಳಬಹುದಾಗಿದೆ.

RELATED NEWS

You cannot copy contents of this page