ಹೋಟೆಲ್ ನೌಕರ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಹೋಟೆಲ್ ನೌಕರನೋರ್ವ ನೇಣುಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಅಡೂರು ಅಡ್ಕ ನಿವಾಸಿ ಶಶಿಧರನ್ (48) ಎಂಬಿವರು ಮೃತ ವ್ಯಕ್ತಿ. ಮನೆ ಅಂಗಳಕ್ಕೆ ನಿರ್ಮಿಸಿದ ಚಪ್ಪರಕ್ಕೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಇವರು ಪತ್ತೆ ಯಾಗಿದ್ದಾರೆ. ಈ ಹಿಂದೆ ಗಲ್ಫ್‌ನಲ್ಲಿದ್ದ  ಶಶಿಧರನ್ ಬಳಿಕ ಕುಂಬಳೆಯಲ್ಲಿ ಹೋಟೆಲೊಂದರಲ್ಲಿ  ಕೆಲಸ ನಿರ್ವಹಿಸುತ್ತಿದ್ದರು. ಇವರು ಮೊನ್ನೆ ಕೆಲಸಕ್ಕೆ ಹೋಗಿರಲಿಲ್ಲವೆನ್ನ ಲಾಗಿದೆ. ಶಶಿಧರನ್ ಹಾಗೂ ತಾಯಿ ತರವಾಡು ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ ತಾಯಿ ಇನ್ನೋರ್ವ ಪುತ್ರನ ಮನೆಗೆ ತೆರಳಿದ್ದರು ತರವಾಡು ಮನೆಯ ಮೋಟಾರು ಹಾನಿಗೀಡಾಗಿದೆ ಯೆಂದೂ ಅದನ್ನು ದುರಸ್ತಿಪಡಿಸಬೇ ಕೆಂದು  ತಾಯಿ ಪುತ್ರನಲ್ಲಿ ತಿಳಿಸಿದ್ದರು. ಇದರಂತೆ ಮೋಟಾರು ತಪಾಸಣೆಗಾಗಿ ತಲುಪಿದಾಗ ಶಶಿಧರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ.

RELATED NEWS

You cannot copy contents of this page