10 ಕೋಟಿ ಯೂನಿಟ್ ದಾಟಿದೆ ದೈನಂದಿನ ವಿದ್ಯುತ್ ಬಳಕೆ
ಕಾಸರಗೋಡು: ರಾಜ್ಯದಲ್ಲಿ ದೈನಂದಿನ ವಿದ್ಯುತ್ ಬಳಕೆ ಈಗ ೧೦ ಕೋಟಿ ಯೂನಿಟ್ ದಾಟಿದೆ. ಕಳೆದ ಸೋಮವಾರದಂದು ರಾಜ್ಯದಲ್ಲಿ ೧೦.೦೧೪೪೬ ಕೋಟಿ ಯೂನಿಟ್ ವಿದ್ಯುತ್ ಉಪಯೋಗಿಸಲಾಗಿದೆ. ಆದರೆ ರಜಾ ದಿನಗಳಲ್ಲಿ ವಿದ್ಯುತ್ ಉಪಯೋಗ ೧೦ ಕೋಟಿ ಯೂನಿಟ್ಗಿಂತ ಕೆಳಗಿಳಿಯುತ್ತಿದೆ.ಹೀಗೆ ಸೋಮವಾರದಂದು ರಾಜ್ಯದಲ್ಲಿ ಉಪಯೋಗಿಸಲಾದ ವಿದ್ಯುತ್ನಲ್ಲಿ ೮.೪೧೨೪೬ ಕೋಟಿ ಯೂನಿಟ್ ವಿದ್ಯುತ್ ರಾಜ್ಯದ ಹೊರಗಿನಿಂದ ಪಡೆಯಲಾದ ವಿದ್ಯುತ್ ಆಗಿದೆ. ಜಲವಿದ್ಯುತ್ ಯೋಜನೆಯಿಂದ ೧.೩೭೯೮೯ ಕೋಟಿ ಯೂನಿಟ್ ಮಾತ್ರವೇ ಉಪ ಯೋಗಿಸಲಾಗಿದೆ. ರಾಜ್ಯದ ಜಲ ವಿದ್ಯುತ್ ಯೋಜನೆಗಳ ಅಣೆಕಟ್ಟು ಗಳಲ್ಲಿ ನೀರಿನ ಮಟ್ಟ ಶೇ. ೫೦ರಷ್ಟು ಮಾತ್ರವೇ ಈಗ ಬಾಕಿ ಉಳಿದು ಕೊಂಡಿದೆ. ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೇ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತಾ ಸಾಗಲು ಪ್ರಧಾನ ಕಾರಣವಾಗಿದೆ