111ನೇ ವಯಸ್ಸಿನಲ್ಲಿ ಮತಚಲಾಯಿಸಿದ ಜಿಲ್ಲೆಯ ಹಿರಿಯ ಮತದಾರೆ

ಕಾಸರಗೋಡು:  111ನೇ ವಯಸ್ಸಿನಲ್ಲಿ ಮತದಾನ ಮಾಡುವ ಮೂಲಕ ಸಿ. ಕುಪ್ಪಚ್ಚಿ  ಗಮನ ಸೆಳೆದರು. ಕಾಞಂಗಾಡ್ ವಿಧಾನಸಭಾ ಕ್ಷೇತ್ರದ ಬೂತ್ 20ರ 486ನೇ ಕ್ರಮಸಂಖ್ಯೆಯ ಮತದಾರೆಯಾಗಿದ್ದಾರೆ ಇವರು. ಮನೆಯಂಗಳದಲ್ಲಿ ಚುನಾವಣಾ ಧಿಕಾರಿಗಳ ಸಮ್ಮುಖದಲ್ಲಿ ಇವರು ಮತದಾನ ಮಾಡಿದರು. ಜಿಲ್ಲಾಧಿ ಕಾರಿ ಕೆ. ಇಂಭಶೇಖರ್ ಉಪಸ್ಥಿತ ರಿದ್ದರು.  ಮತದಾನ ಮಾಡಿದ ಬಳಿಕ ಬ್ಯಾಲೆಟ್‌ಪೇಪರ್‌ನ್ನು ಕವರಿಗೆ ಹಾಕಿ ಲೋಹದ ಪೆಟ್ಟಿಗೆಯಲ್ಲಿರಿಸಲಾಯಿತು. ಇವರು ರಾಜ್ಯದ ಮೊದಲ  ವಿಧಾನಸಭಾ ಚುನಾವಣೆಗೆ  ಮತ ಚಲಾಯಿಸಿದ ಜಿಲ್ಲೆಯ ಅತ್ಯಂತ ಹಿರಿಯ ಮತದಾರೆಯಾಗಿದ್ದಾರೆ.  ಜಿಲ್ಲಾಧಿಕಾರಿ ಇವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

Leave a Reply

Your email address will not be published. Required fields are marked *

You cannot copy content of this page