16.74 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ನಗರದ ಬದಿಬಾಗಿಲಿನಲ್ಲಿ  ಅಬಕಾರಿ ಅಧಿಕಾರಿಗಳು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 16.74 ಲೀಟರ್ (180 ಎಂಎಲ್‌ನ 93 ಪ್ಯಾಕೆಟ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕುಡಾಲ್‌ಮೇರ್ಕಳ ಬಾಯಾಡಿಯ ಅಬ್ದುಲ್ ಬಶೀರ್ ಕೆ.ಎಂ (53) ಎಂಬಾತನ್ನು  ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.  ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಎ.ವಿ. ರಾಜೀವ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರಗಳಾದ ಶ್ಯಾಮ್‌ಜಿತ್, ಅಮಲ್‌ಜಿತ್ ಮತ್ತು ನಿಧೀಶ್ ಎಂಬಿವರು ಒಳಗೊಂಡಿದ್ದಾರೆ.

You cannot copy contents of this page