ನಾಪತ್ತೆಯಾದ ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.  ಕಾಸರಗೋಡು ನೆಲ್ಲಿಕುಂಜೆ ಚೀರುಂಬಾ ರಸ್ತೆ ಬಳಿ ನಿವಾಸಿ  ದಿ| ಕುಮಾರನ್-ಸುಗಂಧಿ ದಂಪತಿ ಪುತ್ರ ಇಂಟೀರಿಯರ್ ಡೆಕೋರೇಟರ್ ಕಾರ್ಮಿಕ ರತೀಶ್ (39) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದರು. ಇವರಿಗಾಗಿ ಮನೆಯವರು ಹುಡುಕಾಟ ಆರಂಭಿಸಿದಾಗ ಕಾಸರಗೋಡು ಹಾರ್ಬರ್ ಸಮೀಪದ ಗಾಳಿಮರದಲ್ಲಿ  ಇಂದು ಬೆಳಿಗ್ಗೆ  ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಸರಗೋಡು ಪೊಲೀಸರು  ಈ ಬಗ್ಗೆ ತನಿಖೆ ನಡೆಸಿ ಮೃತದೇಹವನ್ನು  ಜನರಲ್ ಆಸ್ಪತ್ರೆಗೆ ಸಾಗಿಸಿದರು. ಮೃತರು …

ಶಬರಿಮಲೆ ಚಿನ್ನ ಕಳವು ಪ್ರಕರಣದ ಕಾವು:  ಸ್ಪೀಕರ್ ಪೀಠದ ಮೇಲೇರಲು ಯತ್ನಿಸಿದ ವಿಪಕ್ಷೀಯ ಶಾಸಕರು; ವಿಧಾನಸಭೆಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ

ತಿರುವನಂತಪುರ: ಶಬರಿಮಲೆ ಚಿನ್ನ ಕಳವು ವಿಷಯದಲ್ಲಿ ಆಡಳಿತ ಮತ್ತು ವಿಪಕ್ಷೀಯರ ಮಧ್ಯೆ ತೀವ್ರ ವಾಗ್ವಾದ ಉಂಟಾಗಿ ಅದು ವಿಧಾನಸಭೆಯಲ್ಲಿ ಸಂಘರ್ಷಭರಿತ ವಾತಾವರಣ ಸೃಷ್ಟಿಸಿದ ನಾಟಕೀಯ ಬೆಳವಣಿಗೆ ಇಂದು ಬೆಳಿಗ್ಗೆ ನಡೆಯಿತು.  ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್, ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಸರಕಾರ ಬುಡಮೇಲುಗೊಳಿಸಲೆತ್ನಿಸುತ್ತಿದೆಯೆಂದೂ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಸಹಜವಾದ ರೀತಿಯ ಜಾಮೀನು ಲಭಿಸುವಂತೆ ಮಾಡಲು ಮುಖ್ಯಮಂತ್ರಿಯವರ ಕಚೇರಿಗೆ  ಸಹಾಯ ಲಭಿಸುತ್ತಿದೆಯೆಂದು ಆರೋಪಿಸಿದ್ದರು. ಮಾತ್ರವಲ್ಲ …

ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಪದ್ಮ ಸ್ಟಿಕ್ಕರ್ ಕಟ್ಟಿಂಗ್ ಮಾಲಕ ನಿಧನ

ಕಾಸರಗೋಡು: ಕರಂದಕ್ಕಾಡಿನಲ್ಲಿ ಸ್ಟಿಕರ್ ಕಟ್ಟಿಂಗ್ ಸಂಸ್ಥೆ ಮಾಲಕರಾಗಿದ್ದ ಪದ್ಮನಾಭ ಆಚಾರ್ಯ (59) ನಿಧನ ಹೊಂದಿದರು. ಅಸೌಖ್ಯ ತಗಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಳೆದ ಒಂದು ವಾರದಿಂದ ತೀವ್ರನಿಗಾ ಘಟಕದಲ್ಲಿದ್ದ ಇವರು ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸಂಧ್ಯಾರಾಣಿ, ಮಕ್ಕಳಾದ ಆಕಾಶ್‌ಪದ್ಮ, ಸುಜೀಶ್‌ಪದ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗ್ಯಾಸ್ ಟ್ಯಾಂಕರ್ ಹಿಂಬದಿಗೆ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದು ಇಬ್ಬರು ಗಾಯ

ಉಪ್ಪಳ: ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ನ ಹಿಂಭಾಗಕ್ಕೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ರಾಷ್ಟಿಯ ಹೆದ್ದಾರಿ ಹನಫಿ ಬಜಾರ್‌ನಲ್ಲಿ ನಿನ್ನೆ ಸಂಜೆ ನಡೆದಿದೆ. ಟೆಂಪೋದಲ್ಲಿದ್ದ ಉಳ್ಳಾಲ ನಿವಾಸಿ ಬದ್ರುದ್ದೀನ್ (50), ನೌಷಾದ್ (30) ಎಂಬವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮಂಗಳೂರು ಭಾಗದಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಗೂಡ್ಸ್ ಟೆಂಪೋ ಎದುರಿನಿಂದ ಸಂಚರಿಸುತಿದ್ದ ಗ್ಯಾಸ್ ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿಹೊಡೆದು ಅಪಘಾತ ಉಂಟಾಗಿದೆ. ಇದರಿಂದ ಟೆಂಪೋದ ಎದುರು ಭಾಗ ನಜ್ಜು-ಗುಜ್ಜಾಗಿದ್ದು, ಇಬ್ಬರು ಅದರೊಳಗೆ ಸಿಲುಕಿದ್ದರು. ಮಾಹಿತಿ ತಿಳಿದು …

ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನ ಪ್ರಾಯದ ಮಗು ಮೃತ್ಯು

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 50ದಿವಸ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲ್, ಪೇರಾಲು ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್- ಮರಿಯಮ್ಮತ್ ಸಾಬಿರ ದಂಪತಿ ಪುತ್ರ ಲಸಿನ್ ಇಮಾತ್ ಮೃತಪಟ್ಟ ಮಗು. ನಿನ್ನೆ ರಾತ್ರಿ ಘಟನೆ ನಡೆದಿದೆ. ಅಸ್ವಸ್ಥ ಸ್ಥಿತಿಯಲ್ಲಿ ಮಗುವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ಮಗು ಸಹೋದರ ಸಯಾನ್ ಹಾಗೂ ತಂದೆ, ತಾಯಿಯನ್ನು ಅಗಲಿದೆ. ಇತ್ತೀಚೆಗೆ …

75.11 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕಾಸರಗೋಡು: ಕಾಸರಗೋಡು  ಎಕ್ಸೈಸ್ ಎನ್‌ಫೋರ್ಸ್‌ಮೆಂಟ್  ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದ ಅಬಕಾರಿ ತಂಡ ಪೆರಿಯ ತಾನ್ನೋಟ್ ಕಲಾಂನಗರದ ವಸತಿಗೃಹವೊಂದಕ್ಕೆ ನಡೆಸಿದ ದಾಳಿಯಲ್ಲಿ  ಮಾದಕದ್ರವ್ಯ ವಾದ 75.11 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಕೊಳತ್ತೂರು ಗ್ರಾಮದ ಮಂಜನಡ್ಕ ನಿವಾಸಿ ಅಬ್ದುಲ್ ಶರೀಫ್ ಕೆ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್, ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್  ಸಿಕೆವಿ ಸುರೇಶ್ ಮತ್ತು ಇತರ …

ದುರಸ್ತಿಗಾಗಿ ತಂದು ಹಾಸಿದ ಜಲ್ಲಿಕಲ್ಲುಗಳು: ಕೋಟೆಕಣಿ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ

ಕಾಸರಗೋಡು: ರಸ್ತೆ ದುರಸ್ತಿಗೆ ಚಾಲನೆ ನೀಡಿದಾಗ ಅದು ಸ್ಥಳೀಯರ ಸಂಚಾರಕ್ಕೇ ಸಮಸ್ಯೆ ತಂದಿತ್ತ ಘಟನೆ ಕೋಟೆಕಣಿಯಲ್ಲಿ ಸಂಭವಿಸಿದೆ. ಇಲ್ಲಿನ ಕ್ರಾಸ್‌ರೋಡ್ ದುರಸ್ತಿಗಾಗಿ ಕಾಮಗಾರಿ ಆರಂಭಿಸಲಾಗಿದ್ದು, ಆದರೆ ಅರ್ಧದಲ್ಲೇ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಈಗ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ ಹಲವು ದಿನಗಳಿಂದ ರಸ್ತೆಗೆ ದೊಡ್ಡಗಾತ್ರದ ಜಲ್ಲಿಗಳನ್ನು ತಂದು ಹಾಕಲಾಗಿದ್ದು, ಅದಕ್ಕೆ ಕಲ್ಲಿನ ಹುಡಿಯನ್ನು ಕೂಡಾ ಬೆರೆಸಲಾಗಿದೆ. ಇದು ಸಂಚಾರ ಸಮಸ್ಯೆಯನ್ನು ಸೃಷ್ಟಿಸಿದ ಜೊತೆಯಲ್ಲೇ ಸ್ಥಳೀಯರಿಗೆ ಧೂಳಿನ ಸಮಸ್ಯೆಯನ್ನೂ ಉಂಟುಮಾಡಿದೆ. ಈ ಪರಿಸರದ ಮನೆಗಳ ಗೋಡೆಗಳಲ್ಲಿ ಈಗ ಧೂಳು ತುಂಬಿಕೊಂಡಿದ್ದು, …

ಮಂಗಳೂರು-ತಿರುವನಂತಪುರ ತೃತೀಯ ರೈಲುಹಳಿ ಯೋಜನೆ ಸಾಕಾರದತ್ತ

ಕಾಸರಗೋಡು: ಮಂಗಳೂರಿನಿಂದ ಕಾಸರಗೋಡು ಮೂಲಕ ತಿರುವನಂತಪುರದ ತನಕ ತೃತೀಯ ರೈಲು ಹಳಿ ಯೋಜನೆ ಶೀಘ್ರ ಸಾಕಾರಗೊಳ್ಳಲಿದೆ ಎಂದು ದಕ್ಷಿಣ ರೈಲ್ವೇಯ ಹೆಚ್ಚುವರಿ ಜನರಲ್ ಮೆನೇಜರ್ ವಿಪಿನ್ ಕುಮಾರ್ ಹೇಳಿದ್ದಾರೆ. ಇದಕ್ಕಿರುವ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಈಗ ತಯಾರಿಸಲಾಗುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಹಳಿ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ. ತೃತೀಯ ರೈಲ್ವೇ ಹಳಿ ನಿರ್ಮಾಣ ಕೇರಳಕ್ಕೆ ಅತೀ ಅಗತ್ಯವಾಗಿದೆ. ಈ ಯೋಜನೆಯ ನಿರ್ಮಾಣ ಕೆಲಸ ಪೂರ್ಣಗೊಂಡಲ್ಲಿ ಕೇರಳದ ರೈಲು ಯಾತ್ರಾ ಕ್ಲೇಶಕ್ಕೆ ಗರಿಷ್ಠ …

ವಿಪಕ್ಷ ಮುಖಂಡ ವಿ.ಡಿ. ಸತೀಶನ್‌ರ ಯಾತ್ರೆ ಯಶಸ್ವಿಗೆ ಕಾಂಗ್ರೆಸ್ ನಾಯಕತ್ವ ನಿರ್ಧಾರ

ಕಾಸರಗೋಡು: ವಿಪಕ್ಷ ಮುಖಂಡ ವಿ.ಡಿ. ಸತೀಶನ್ ನೇತೃತ್ವ ನೀಡುವ ಯಾತ್ರೆಯನ್ನು ಯಶಸ್ವಿಗೊಳಿಯಲು ಜರಗಿದ ಸಭೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್ ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ನೀಲಕಂಠನ್, ಹಕೀಂ ಕುನ್ನಿಲ್, ಐಕ್ಯರಂಗ ಜಿಲ್ಲಾ ಸಂಚಾಲಕ ಎ. ಗೋವಿಂದನ್ ನಾಯರ್, ಸೋಮಶೇಖರ ಶೇಣಿ ಸಹಿತ ಹಲವಾರು ಮುಖಂಡರು ಮಾತನಾಡಿದರು. ಕುಂಬಳೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮ, ಕಾಸರಗೋಡು, ಉದುಮ, ಕಾಞಂಗಾಡ್, …

ಕೆಎಸ್‌ಆರ್‌ಟಿಸಿ ಬಸ್‌ಗೆ ಸಂಚಾರ ತಡೆ ಸೃಷ್ಟಿಸಿ ಕಾರು ಚಾಲಕನ ಅಪಾಯಕರ ಸಂಚಾರ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗೆ ಮಾರ್ಗತಡೆ ಸೃಷ್ಟಿಸಿ ಗಂಟೆಗಳ ಕಾಲ ಕಾರು ಚಾಲಕ ಅಪಾಯಕರವಾದ ರೀತಿಯಲ್ಲಿ ಪ್ರಯಾಣಿಸಿದ ಬಗ್ಗೆ ದೂರಲಾಗಿದೆ. ಕಾಸರಗೋಡಿನಿಂದ ಕೋಟಯಂಗೆ ಹೊರಟ ಸ್ವಿಪ್ಟ್ ಬಸ್‌ಗೆ ಓವರ್‌ಟೇಕ್ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿ ಈತ ಮಾರ್ಗತಡೆ ಸೃಷ್ಟಿಸಿದ್ದಾನೆನ್ನಲಾಗಿದೆ. ಇದರ ದೃಶ್ಯಗಳು ಬಹಿರಂಗಗೊಂಡಿರುವುದರೊಂದಿಗೆ ಟೀಕೆಗಳು ವ್ಯಕ್ತವಾಗಿವೆ. ಬಸ್ ಕಾರನ್ನು ಓವರ್‌ಟೇಕ್ ಮಾಡಲು ಯತ್ನಿಸಿರುವುದೇ ಕಾರುಚಾಲಕನಿಗೆ ದ್ವೇಷ ಉಂಟಾಗಲು ಕಾರಣವೆನ್ನಲಾಗಿದೆ. ಉದುಮದಿಂದ 7 ಕಿಲೋ ಮೀಟರ್‌ವರೆಗೆ ಬಸ್‌ಗೆ ಮುಂದಕ್ಕೆ ಚಲಿಸಲು ಈತ ಅವಕಾಶ ನೀಡಲಿಲ್ಲ.  ನಿರಂತರ ಹಾರ್ನ್ ಮೊಳಗಿಸಿದರೂ …