ಪೊಯಿನಾಚಿ ಮಂಡಲಿಪ್ಪಾರದಲ್ಲಿ ನಿಗೂಢವಾಗಿ ಯುವಕನ ಮೃತದೇಹ ಪತ್ತೆ: ಕೊಲೆಯೆಂದು ಶಂಕೆ
ಕಾಸರಗೋಡು: ಮೇಲ್ಪರಂಬ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ಪೊಯಿನಾಚಿ, ಮಂಡಲಿಪ್ಪಾರದಲ್ಲಿ ಯುವಕನೋರ್ವ ನಿಗೂಢವಾದ ಸನ್ನಿವೇಶದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೊಲೆಕೃತ್ಯವೆಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಚಟ್ಟಂಚಾಲ್ ಮಂಡಲಿಪ್ಪಾರದ ಅಬ್ದುಲ್ ರಹ್‌ಮಾನ್‌ರ ಪುತ್ರ ಶಬೀರ್ (40) ಮೃತಪಟ್ಟವರು. ಇಂದು ಬೆಳಿಗ್ಗೆ ಪೊಯಿನಾಚಿ ಮಂಡಲಿಪ್ಪಾರ ರಸ್ತೆಯ ಞಾನಿಕ್ಕಲ್ ಸೇತುವೆ ಅಡಿಯಲ್ಲಿ ಮೃತದೇಹ ಕಂಡು ಬಂದಿದೆ. ಅಂಗಿ ಮಾತ್ರವೇ ದೇಹದಲ್ಲಿದ್ದು, ಗಾಯಗಳು ಕಂಡುಬಂದಿದೆ. ಇದು ಸಾವಿನಲ್ಲಿ ಸಂಶಯ ಉಂಟುಮಾಡಿದೆ. ಸಮೀಪದಲ್ಲೇ ರಕ್ತದ ಕಲೆಗಳು ಕಂಡು ಬಂದಿರುವುದಾಗಿ ಪೊಲೀಸರು …
Read more “ಪೊಯಿನಾಚಿ ಮಂಡಲಿಪ್ಪಾರದಲ್ಲಿ ನಿಗೂಢವಾಗಿ ಯುವಕನ ಮೃತದೇಹ ಪತ್ತೆ: ಕೊಲೆಯೆಂದು ಶಂಕೆ”