ಹಲವಾರು ಕುಟುಂಬಗಳು ಸಂಕಷ್ಟದಲ್ಲಿ: ಬಾವಿ, ಹೊಳೆಗಳಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟ; ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ 4 ದಿನಕ್ಕೊಮ್ಮೆ ನಳ್ಳಿನೀರು ವಿತರಣೆ

ಉಪ್ಪಳ: ಹವಾಮಾನದಲ್ಲಿ ಬಿಸಿ ಏರುತ್ತಿರುವಂತೆಯೇ ಕುಡಿಯುವ ನೀರಿಗೆ ಕ್ಷಾಮ ತಲೆದೋರಲು ಆರಂಭ ವಾಗಿದೆ. ಪ್ರತೀ ವರ್ಷ ಬೇಸಿಗೆಕಾಲದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿ ಯಲ್ಲಿ ಕುಡಿಯುವ ನೀರು ಕ್ಷಾಮ ವ್ಯಾಪಕವಾಗುತ್ತಿದ್ದು ಈ ಬಾರಿ ಈಗಲೇ ನೀರಿನ ಕ್ಷಾಮ ಕಂಡುಬರುತ್ತಿದೆ. ಬಾವಿ ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಉಪ್ಪಳ ಹೊಳೆಯ ಕೊಡಂಗೆಯಲ್ಲಿ ನಿರ್ಮಿಸಿರುವ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ನೀರು ಕಡಿಮೆಯಾಗಿರು ವುದು ಪೈಪ್ ಮೂಲಕ ವಿತರಣೆಗೆ ತೊಡಕಾಗಿದೆ. ಇದುವರೆಗೆ ಎರಡು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದ ಕುಡಿಯುವ ನೀರು ಈಗ ನಾಲ್ಕು ದಿನಕ್ಕೊಮ್ಮೆ ವಿತರಣೆಗೊಳ್ಳಲಾರಂಭಿಸಿದೆ. ಇದರಿಂದಾಗಿ ನಳ್ಳಿ ನೀರನ್ನೇ ಆಶ್ರಯಿ ಸುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ಕೊಡಂಗೆ ಬಾವಿಯಿಂದ ಬೇಕೂರು ಹಿರಣ್ಯಪದವಿನಲ್ಲಿರುವ ಬೃಹತ್ ಟ್ಯಾಂಕ್‌ನಲ್ಲಿ ನೀರು ತುಂಬಿಸಿ ಪಂಚಾಯತ್ ವ್ಯಾಪ್ತಿಯ ಸುಮಾರು 5000 ಕುಟುಂಬಗಳಿಗೆ ನೀರು ವಿತರಿಸಲಾಗುತ್ತಿದೆ. ಆದರೆ ಈಗ ನಾಲ್ಕು ದಿನಗಳಿಗೊಮ್ಮೆ ವಿತರಿಸುತ್ತಿರುವ ಕಾರಣ ಕೆಲವು ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಇಲ್ಲಿ ಇನ್ನೊಂದು ಟ್ಯಾಂಕ್ ನಿರ್ಮಿಸಿ ನೀರು ವಿತರಣೆಯನ್ನು ಸಮರ್ಪಕಗೊಳಿಸಬೇ ಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

You cannot copy contents of this page