ರಿಪ್ಪರ್ ಚಂದ್ರನ್‌ಗೆ ಗಲ್ಲು ಶಿಕ್ಷೆ ಲಭಿಸಿದ ಪ್ರಕರಣ: ನೇರ ಸಾಕ್ಷಿಯಾದ ವಾಮಂಜೂರು ನಿವಾಸಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಇಡೀ ನಾಡನ್ನೇ ಬೆಚ್ಚಿ ಬೀಳಿಸಿದ ಕುಖ್ಯಾತ ದರೋಡೆಕೋರ ರಿಪ್ಪರ್ ಚಂದ್ರನ್‌ಗೆ ಗಲ್ಲು ಶಿಕ್ಷೆ ಲಭಿಸಿದ ಪ್ರಕರಣದಲ್ಲಿ ನೇರ ಸಾಕ್ಷಿಯಾಗಿದ್ದ ವ್ಯಕ್ತಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ವಾಮಂಜೂರು ಚೆಕ್‌ಪೋಸ್ಟ್ ಶ್ರೀ ಶಾಸ್ತಾವೇಶ್ವರ ಕ್ಷೇತ್ರ ಸಮೀಪದ ಶ್ರೀ ಶಾಸ್ತಾ ನಿಲಯದ ಬಾಲಚಂದ್ರ (53) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಇವರು ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಸಹೋದರಿ ಶಶಿಕಲ ನಿನ್ನೆ ಸಂಜೆ  ಮನೆಗೆ ತಲುಪಿ ನೋಡಿದಾಗ ಮೃತದೇಹ ಕಂಡು ಬಂದಿದೆ. ಮನೆಯ …

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಶೋಧ ಮುಂದುವರಿಕೆ

ಉಪ್ಪಳ: ಸಮುದ್ರ ವೀಕ್ಷಿಸಲು ತಲುಪಿದ ವೇಳೆ ಬಲವಾದ ಅಲೆಯಲ್ಲಿ ಸಿಲುಕಿ ನಾಪತ್ತೆಯಾದ ಯುವಕನ ಪತ್ತೆಗಾಗಿ ಶೋಧ ಮುಂದುವರಿಯುತ್ತಿದೆ.  ಮಂಜೇಶ್ವರ ಚೌಕಿ ನಿವಾಸಿ ಉಮರುಲ್ ಫಾರೂಕ್ ಎಂಬವರ ಪುತ್ರ ಮೊಹಮ್ಮದ್ ಸೈನುಲ್ ಆಬಿದ್ (18) ಎಂಬಾತನಿಗಾಗಿ ಶೋಧ ನಡೆಯುತ್ತಿದೆ. ಮೊಹಮ್ಮದ್ ಸೈನುಲ್ ಆಬಿದ್ ತಾಯಿ ಹಾಗೂ ಕುಟುಂಬ ಸಮೇತ ನಿನ್ನೆ ಸಂಜೆ ಕುಂಡುಕೊಳಕೆ ಬೀಚ್‌ಗೆ ಬಂದಿದ್ದರು. ಸಮುದ್ರ ಬದಿಯಲ್ಲಿ ನಿಂತಿದ್ದ   ಮೊಹಮ್ಮದ್ ಸೈನುಲ್ ಆಬಿದ್ ಹಾಗೂ ಈತನ ಸಹೋದರಿ ಅಲೆಯಲ್ಲಿ ಸಿಲುಕಿದ್ದು, ಈ ವೇಳೆ ಜತೆಗಿದ್ದವರ ಬೊಬ್ಬೆ ಕೇಳಿ …

ಡಿವೈಎಫ್‌ಐ ಕಾರ್ಯಕರ್ತನಿಗೆ ಬಿಯರ್ ಬಾಟ್ಲಿಯಿಂದ ಹಲ್ಲೆ

ಕುಂಬಳೆ: ಕೊಪಾಡಿ ಕಡಪ್ಪುರದಲ್ಲಿ ಡಿವೈಎಫ್‌ಐ ಕಾರ್ಯಕರ್ತನಿಗೆ ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ನಡೆದಿದೆ. ಗಾಯಗೊಂಡ ಕೊಯಿಪ್ಪಾಡಿಯ ನಿಸಾಮ್ (28)ರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸಜನ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ನಾಲ್ಕು ಮಂದಿ ಸೇರಿ ಹಲ್ಲೆಗೈದಿರುವುದಾಗಿ ನಿಸಾಮ್ ಆರೋಪಿಸಿದ್ದಾರೆ. ರಾಜಕೀಯ ಚರ್ಚೆ ವೇಳೆ ಘರ್ಷಣೆ ನಡೆದಿರುವುದಾಗಿ ಹೇಳಲಾಗುತ್ತಿದೆ.

ಮನೆಯೊಳಗೆ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕಳತ್ತೂರಿನಲ್ಲಿ ಮಹಿಳೆಯೊಬ್ಬರು ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳತ್ತೂರು ಅಮೆರಿಕ ರೋಡ್‌ನ ಅಬೂಬಕ್ಕರ್ ಎಂಬವರ ಪತ್ನಿ ಆಮಿನ (70) ಮೃತಪಟ್ಟವರಾಗಿದ್ದಾರೆ.   ಸಿಮೆಂಟ್‌ನ ಶೀಟ್ ಹೊದಿಸಿದ ಪುಟ್ಟ ಮನೆಯಲ್ಲಿ ಆಮಿನ ವಾಸಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಮನೆಯೊಳಗಿನಿಂದ ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು  ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಲುಪಿ ಪರಿಶೀಲಿಸಿದಾಗ ಮೃತದೇಹ ಮನೆಯೊಳಗೆ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ನಾಲ್ಕು ದಿನಗಳ ಹಿಂದೆ ಸಾವು ಸಂಭವಿಸಿರಬಹುದೆಂದು ಅಂದಾಜಿಸಲಾ ಗುತ್ತಿದೆ. ಮನೆಯ ಮುಂಭಾಗ ಹಾಗೂ …

ಸಂಕದಡಿ ಟಿಪ್ಪರ್ ಲಾರಿ ಚಾಲಕ ಸಾವನ್ನಪ್ಪಿದ ಘಟನೆ : ಇನ್ನೂ ಮುಂದುವರಿಯುತ್ತಿರುವ ನಿಗೂಢತೆ

ಕಾಸರಗೋಡು: ಪೊಯಿನಾಚಿಗೆ ಸಮೀಪದ ಮಂಡಲಿಪಾರ ಞಾಣಿಕಡವು ರಸ್ತೆಯ ಸಂಕದ ಅಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಟಿಪ್ಪರ್ ಲಾರಿ ಚಾಲಕನ ಸಾವಿನ ಹಿಂದಿನ ನಿಗೂಢತೆ ಇನ್ನೂ ಮುಂದುವರಿಯುತ್ತಿದೆ. ಬೆಂಡಿಚ್ಚಾಲ್ ಮಂಡಲಿಪ್ಪಾರ ನಿವಾಸಿ ಅಬ್ದುಲ್ ಕಬೀರ್ (40) ಎಂಬವರು ಕಳೆದ ಮಂಗಳವಾರ ಸಂಕದ ಅಡಿ ಭಾಗದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದು ಅಲ್ಲೇ ಪಕ್ಕದ  ತೋಟದಿಂದ ತೆಂಗಿನಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತದೇಹವನ್ನು ಮೊದಲು ಕಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮಹಜರು ನಡೆಸಿದ …

ಅಪರಿಮಿತವಾಗಿ ನೋವು ನಿವಾರಕ ಮಾತ್ರೆ ಸೇವಿಸಿ ವ್ಯಕ್ತಿ ಮೃತ್ಯು

ಪೆರ್ಲ: ನೋವು ನಿವಾರಕ ಮಾತ್ರೆಗಳನ್ನು ಅಪರಿಮಿತವಾಗಿ ಸೇವಿಸಿ ತೀವ್ರ ಅಸ್ವಸ್ಥಗೊಂಡು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಬಜಕೂಡ್ಲು ನಿವಾಸಿ ಮುಂಡಪ್ಪ ರೈ (59) ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಇವರು ಚಿಕಿತ್ಸೆಯಲ್ಲಿದ್ದರೆನ್ನಲಾಗಿದೆ. ಈ ಮಧ್ಯೆ ಮೊನ್ನೆ ಅಪರಿಮಿತವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾU ಲಿಲ್ಲ. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ಸುಪ್ರೀತ, ಸುಜಿತ್ (ಗಲ್ಫ್), ಸಹೋದರ- ಸಹೋದರಿಯರಾದ ಶಾಂತರಾಂ ರೈ, …

ಕಾಡಮನೆ ಪ್ರಶಾಂತ್ ಭವನದಲ್ಲಿದ್ದ ವ್ಯಕ್ತಿ ಮೃತ್ಯು

ಬದಿಯಡ್ಕ:  ಒಂಭತ್ತು ವರ್ಷಗಳಿಂದ ಬದಿಯಡ್ಕ ಬಳಿಯ ಕಾಡಮನೆ ಪ್ರಶಾಂತ್ ಭವನ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಮೃತಪಟ್ಟರು. ತಲಶ್ಶೇರಿ ಚಾಂಬಾಡ್ ವಲಿಯ ಪರಂ ಬತ್ತು ನಿವಾಸಿ ವಿ.ಪಿ. ಅಬ್ದುಲ್ ಅಸೀಸ್ (59) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗೆ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂ ಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಸಫಿಯ, ಇಬ್ಬರು ಮಕ್ಕಳು, ಸಹೋದರಿ ಸಹಿತ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಂಬಂಧಿಕರು ಆಗಮಿಸಿ ಮೃತದೇಹವನ್ನು ಊರಿಗೆ ಕೊಂಡೊಯ್ಯುತ್ತಿದ್ದಾರೆ.

20 ವರ್ಷದಿಂದ ದುರಸ್ತಿ ಕಾರ್ಯ ನಡೆಯದ ನೀರ್ಚಾಲು-ಮುಗು:ರಸ್ತೆ ಶೋಚನಿಯಾವಸ್ಥೆ ವಿರುದ್ಧ ಸ್ಥಳೀಯರ ರೋಷ

ನೀರ್ಚಾಲು: ಸಾಯಿಮಂದಿರ ಮುಗುರಸ್ತೆ ಹಾಗೂ ಉರ್ಲಿತ್ತಡ್ಕ ಬೇಳ ರಸ್ತೆಯು ಶೋಚನೀಯಾವಸ್ಥೆಯಲಿದೆ ಎಂದು ನಾಗರಿಕರು ದೂರುತ್ತಿದ್ದಾರೆ. 20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಿರುವುದರಿಂದ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದೆ. ಇತ್ತೀಚೆಗೆ ಜಲಪ್ರಾಧಿಕಾರ ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ ಅಳವಡಿಸಲು ಹೊಂಡಗಳನ್ನು ತೋಡಿ ಅದನ್ನು ಸಮರ್ಪಕವಾದ ರೀತಿಯಲ್ಲಿ ಮುಚ್ಚದಿರುವುದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಮಳೆಗಾಲ ಪ್ರಾರಂಭವಾದಲ್ಲಿ ಈ ರಸ್ತೆ ಮೂಲಕ ಸಂಚಾರ ದುಸ್ತರವಾಗಲಿದೆ.20 ವರ್ಷಗಳಿಂದ ಯಾವುದೇ …

ಪಚ್ಲಂಪಾರೆ ಎಸ್‌ಸಿ ಉನ್ನತಿಯ ಸ್ಮಶಾನ ಅಭಿವೃದ್ಧಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪಚ್ಲಂಪಾರೆ ಎಸ್.ಸಿ ಉನ್ನತಿಯಲ್ಲಿರುವ ಸ್ಮಶಾನ ಶೋಚನೀ ಯÁವಸ್ಥೆಯಲ್ಲಿದ್ದು, ಅಭಿವೃದ್ದಿ ಗೊಳಿಸಲು ನಿವಾಸಿಗಳು ಒತ್ತಾ ಯಿಸಿದ್ದಾರೆ. ಸ್ಮಶಾನದಲ್ಲಿ ಮೃತದೇಹ ಸುಡುವ ಶೆಡ್ಡ್ ಹಾಗೂ ಹೊರ ಭಾಗÀ ಅಳವಡಿಸಿದ ತಗಡ್ ಶೀಟ್ ತುಕ್ಕು ಹಿಡಿದು ಹಾನಿಗೀಡಾಗಿದ್ದು, ಮಳೆಗಾಲದಲ್ಲಿ ಸಮಸ್ಯೆಗೆ ಕಾರಣ ವಾಗಿದೆ. ಅಲ್ಲದೆ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆಯಿಲ್ಲದಿರುವು ದರಿಂದ ರಾತ್ರಿ ಹೊತ್ತಲ್ಲಿ ಪರದಾ ಡಬೇಕಾಗಿದೆ. ಹಲವು ವರ್ಷ ಗಳಿಂದಲೂ ಅಭಿವೃದ್ದಿ ಬಗ್ಗೆ ಪಂ ಚಾಯತ್ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರೂ ಇದು ವರೆಗೂ ದುರಸ್ತಿಕಾರ್ಯದ ಬಗ್ಗೆ ಕ್ರಮಯಿಲ್ಲ …

ಐಲ ಕ್ಷೇತ್ರ ವಿಷು ಜಾತ್ರೆ: ಬೆಡಿ ಉತ್ಸವ ನಾಳೆ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರಾ ಮಹೋತ್ಸವ ಆರಂಭಗೊAಡು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತಿದೆ. ಇಂದು ನಡುದೀಪೋತ್ಸವದ ಪ್ರಯುಕ್ತ ರಾತ್ರಿ 7.45ರಿಂದ ಮಹಾ ತಿರುವಾದಿರಕಳಿ, 8ರಿಂದ ಮಾಗಣೆ ಕೂಟ, ಪಲ್ಲಕ್ಕಿ ಉತ್ಸವ ಸಹಿತ ಬಲಿ ಉತ್ಸವ, ನಡು ದೀಪೋತ್ಸವ, ನಾಳೆ ಪೂರ್ವಾಹ್ನ 7ರಿಂದ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ 7.45ರಿಂದ ಬಲಿ ಉತ್ಸವ, ಕೆರೆದೀಪೋತ್ಸವ, 9.30ರಿಂದ ಐಲ ಕ್ಷೇತ್ರದ ಮೈದಾನದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, 10.30ರಿಂದ ಕಟ್ಟೆ ಪೂಜೆ, …