ಕೋಟ್ಯಂತರ ರೂ.ಗಳ ವಂಚನೆ: ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

ಕಾಸರಗೋಡು:  ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ  ಸಂಬಂಧ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡಿದ್ದ ಇಬ್ಬರನ್ನು  ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಬೇಡಗಂ ಪೊಲೀಸ್ ಠಾಣೆ,   ಕೇರಳ ಹಾಗೂ ಹೊರ ರಾಜ್ಯಗಳ  ಹಲವು ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾದ ಕುಳತ್ತುಪುಳ ನೆಲ್ಲಿಮೂಡ್ ಕಾಲಿಲ್ ವೀಟಿಲ್‌ನ ಶೀಬಾ ಎಸ್ (46) ಎಂಬಾಕೆಯನ್ನು ಕೊಲ್ಲಂ ಜಿಲ್ಲೆಯ ಪುನಲೂರು ವಿಲ್ಲೇಜ್‌ನ ಪತ್ತಡಿ ಎಂಬಲ್ಲಿಂದ, ವಿಸಾ ವಂಚನೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಕುರಿಯನ್ ಮ್ಯಾಥ್ಯೂ ಯಾನೆ ವಿಪಿ (37) ಎಂಬಾತನನ್ನು ಕೋಟ್ಟಯಂ ಜಿಲ್ಲೆಯ ಮಣ್ಣಾರ್‌ಕಾಡ್  ವಿಲ್ಲೇಜ್‌ನ ಮಾಲಂಕರ ಎಂಬಲ್ಲಿಂದ ಬಂಧಿಸಲಾಗಿದೆ. ಬೇಡಗಂ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್ ನಿರ್ದೇಶ ಪ್ರಕಾರ ಗ್ರೇಡ್ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಜೀಶ್ ತಾರಂತಟ್ಟ, ಸಿವಿಲ್ ಪೊಲೀಸ್ ಆಫೀಸರ್ ಸಂದೀಪ್, ಮಹಿಳಾ ಸಿವಿಲ್ ಪೊಲೀಸ್ ಆಫೀಸರ್ ಅನಿತಾ ಎಂಬಿವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

RELATED NEWS

You cannot copy contents of this page